
ಆಲೂರು : ಇಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪೃಥ್ವಿ ಜಯರಾಮ್ ರವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ಪ್ರಕ್ರಿಯೆಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ನೂತನ ಅಧ್ಯಕ್ಷ ಪೃಥ್ವಿ ಜಯರಾಮ್ ಮಾತನಾಡಿ ಎಲ್ಲರ ಇಚ್ಛೆಯಂತೆ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಮಾಡಿದ್ದು ಎಲ್ಲಾ ಮುಖಂಡರಿಗೂ ಹಾಗೂ ಪಂಚಾಯಿತಿ ಸದಸ್ಯರುಗಳಿಗೆ ಅಭಿನಂದನೆ ತಿಳಿಸಿದರು
ಈ ಹಿಂದೆ ಇದ್ದ ಅಧ್ಯಕ್ಷರಿಗೆ ಹೇಗೆ ಸಹಕಾರ ನೀಡಿದ್ದಿರೋ ನನಗೂ ಕೂಡ ನಿಮ್ಮೆಲ್ಲರ ಸಹಕಾರ ನೀಡಿ ನಿಮ್ಮ ಮಾರ್ಗದರ್ಶನದಂತೆ ಪಂಚಾಯಿತಿ ಅಭಿವೃದ್ಧಿಗೇ ಶ್ರಮಿಸುವುದಾಗಿ ತಿಳಿಸಿ ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಗೆ ಬರುವ ಸಮಸ್ಥ ಗ್ರಾಮಸ್ಥರ ವಿಶ್ವಾಸ ಪಡೆದು ನನ್ನನ್ನು ಗೆಲ್ಲಿಸಿದ ಮರಸು ಹೊಸಳ್ಳಿ ಗ್ರಾಮಸ್ಥರ ಆಶೀರ್ವಾದದೊಂದಿಗೆ ಹಳ್ಳಿಗಳ ಅಭಿವೃದ್ಧಿ ಕಾರ್ಯಗಳತ್ತ ಗಮನಕೊಟ್ಟು ಜನರು ಇಟ್ಟಂತ ನಂಬಿಕೆಯನ್ನು ಉಳಿಸಿಕೊಂಡು ಕಾರ್ಯನಿರ್ವಹಿಸುತ್ತೇನೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಪಕ್ಷಬೇಧ ಮರೆತು ಕೆಲಸ ಮಾಡುತ್ತೇನೆ ಮತ್ತು ಜಿಲ್ಲೆಗೆ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡುವುದಾಗಿ ತಿಳಿಸಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರುಗಳಿಗೂ ಕೃತಜ್ಞತೆ ತಿಳಿಸಿದರು.
ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ನಟರಾಜು ನಾಕಲಗೂಡು ಮಾತನಾಡಿ ಪೃಥ್ವಿ ಜಯರಾಮ್ ರವರು ಎಲ್ಲರ ಒಮ್ಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ ನೂತನ ಅಧ್ಯಕ್ಷರುಗಳು ಮೂಲಭೂತ ಸೌಕರ್ಯಗಳ ಕಡೆ ಹೆಚ್ಚು ಗಮನ ಹರಿಸಿ ರಸ್ತೆ, ನೀರು, ಬೀದಿದೀಪ, ಚರಂಡಿಗಳಿಗೆ ಮೊದಲ ಆದ್ಯತೆ ನೀಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಹೆಮ್ಮಿಗೆ ಮೋಹನ್, ಶಾಂತಕೃಷ್ಣ, ಹಾಸನ ಹಾಲು ಒಕ್ಕೂಟ ನಿರ್ದೇಶಕ ಪಿ, ಲ್, ನಿಂಗರಾಜ್,ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಶಿವಮೂರ್ತಿ,ಮುಖಂಡರಾದ ಮಡಬಲು ಲೋಕೇಶ್, ಸಂದೇಶ್, ಮಹೇಂದ್ರ, ಹಾಗೂ ಮಹೇಶ್ ರವಿಕುಮಾರ್ ಗ್ರಾ,. ಪಂ, ಮಾಜಿ ಅಧ್ಯಕ್ಷರಾದ ನಿಂಗರಾಜು ಕವಿತ ವಜ್ರೇಶ್, ರುದ್ರೇಶ್ ಮಾಜಿ ಉಪಾಧ್ಯಕ್ಷರುಗಳಾದ ದೇವರಾಜು ಹಾಗೂ ಎಲ್ಲಾ ಗ್ರಾ ಪಂ, ಸದಸ್ಯರುಗಳಿದ್ದರು.


