
ಬೇಲೂರು : ತಾಲೂಕಿನ ಅರೇಹಳ್ಳಿ ಹೋಬಳಿಯ ಕಣಗುಪ್ಪೆ ಗ್ರಾಮದಲ್ಲಿ ಕಟ್ಟೆಗೆ ಮಣ್ಣು ತುಂಬಿದ ಪರಿಣಾಮ ಕಟ್ಟೆ ಹೊಡೆದು ಸುಮಾರು ೫೦ ಎಕರೆಗೂ ಹೆಚ್ಚು ರೈತರು ಬೆಳೆದಂತ ಗದ್ದೆ ಸಂಪೂರ್ಣ ಕೊಚ್ಚಿಹೋಗಿದ ಹಿನ್ನಲೆಯಲ್ಲಿ ತಹಶಿಲ್ದಾರ್ ಎಂ ಮಮತಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅರೇಹಳ್ಳಿ ಹೋಬಳಿಯ ಕಣಗುಪ್ಪೆ ಗ್ರಾಮದ ಸರ್ವೆ ನಂಬರ್ ೫೦ ರಲ್ಲಿ ಇರುವಂತಹ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ಗ್ರಾಮದ ಲಿಂಗಶೆಟ್ಟಿ ಹಾಗೂ ಮಂಜುಶೆಟ್ಟಿ ಎಂಬುವವರು ಒತ್ತುವರಿ ಮಾಡಿಕೊಂಡಿದ್ದಾರೆ ಹಾಗೂ ಶುಂಠಿ ಬೆಳೆಯುವ ಸಂದರ್ಭದಲ್ಲಿ ಕಾಲುವೆ ಒಡ್ಡಿಗೆ ಮಣ್ಣು ಸುರಿದ ಪರಿಣಾಮವಾಗಿ ನೆರೆ ಹಾವಳಿಯಿಂದಾಗಿ ಸಂಪೂರ್ಣ ಬೆಳೆ ನಾಶವಾಗಿದೆ ಎಂದು ಗ್ರಾಮಸ್ಥರು ಮಾಧ್ಯಮದ ಮೂಲಕ ತಹಶಿಲ್ದಾರ್ ಅವರಿಗೆ ತಮ್ಮ ಅಳಲನ್ನು ತೋಡಿಕೊಂಡ ಹಿನ್ನಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ತಹಶಿಲ್ದಾರ್ ಎಂ ಮಮತಾ ಮಾಧ್ಯಮಗಳಲ್ಲಿ ಸಂಪೂರ್ಣ ಬೆಳೆ ಕೊಚ್ಚಿಹೋದ ಸುದ್ದಿ ಪ್ರಕಟವಾದ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆಗೆ ಮಾಡಲು ಬಂದಿದ್ದೇನೆ ಇಲ್ಲಿ ಬಂದು ನೋಡಿದಾಗ ನಮಗೆ ತುಂಬಾ ನೋವಾಗುತ್ತದೆ.
ರೈತ ತಾವು ಕಷ್ಟ ಪಟ್ಟು ಬೆಳೆದಂತಹ ಬೆಳೆ ಯಾರೊ ಒಬ್ಬರ ಅಸೂಯೆಗೆ ಬಲಿಯಾಗಿದೆ ಅಂದರೆ ಬೇಸರದ ಸಂಗತಿ ಕೂಡಲೇ ಯಾರೂ ಕೆರೆಯ ಒಡ್ಡನ್ನು ಕಟ್ಟಿದ್ದಾರೆ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಮಂಜೂರು ಮಾಡಿಸಿಕೊಂಡಿತುತ್ತಾರೆ ಅಂತಹವರ ಮೇಲೆ ಕಠಿಣ ಕೃಮ ಕೈಗೊಳ್ಳುವುದಲ್ಲದೆ ಎನು ಬೆಳೆ ನಷ್ಟ ಹೊಂದಿರುತ್ತಾರೆ ಪರಿಹಾರ ನೀಡಲು ಸೂಚಿಸಲಾಗುವುದು.
ಈಗಾಗಲೇ ಸರ್ಕಾರ ಯಾರಿಗೆ ಭೂಮಿ ಇರುವುದಿಲ್ಲ ಅಂತಹವರಿಗೆ ಭೂಮಿ ಮಂಜೂರು ಮಾಡಿರುತ್ತದೆ ಮಂಜೂರಾತಿ ಸಮಯದಲ್ಲಿ ಕೆರೆಕಟ್ಟೆಗಳನ್ನು ಒತ್ತುವರಿ ಮಾಡುವುದಾಗಲಿ ಸಾರ್ವಜನಿಕರಿಗೆ ಮಾಡುವುದಾಗಲಿ ಅಥವಾ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿದ್ದು ಕಂಡುಬಂದರೆ ಅಂತವರ ಮೇಲೆ ಕ್ರಮ ಕೈಗೊಂಡು ಮಂಜುರಾತಿಯನ್ನು ವಾಪಸ್ಸು ಪಡೆಯಲು ಸರ್ಕಾರದ ಆದೇಶವಿದ್ದು ಸಂಪೂರ್ಣ ದಾಕಲಾತಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಚಂದ್ರೇಗೌಡ,ಭಾನುಪ್ರಕಾಶ್,ಹಾಗೂ ಗ್ರಾಮಸ್ಥರು ಹಾಜರಿದ್ದರು.
