ಹಾಸನ: ನಗರದ ಹೊರವಲಯದಲ್ಲಿರುವ ಕಾಮಧೇನು ವೃದ್ದಾಶ್ರಮಕ್ಕೆ ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ವತಿಯಿಂದ ಭೇಟಿ ನೀಡಿ ಅಲ್ಲಿರುವ ಹಿರಿಯ ಜೀವಗಳೊಂದಿಗೆ ಕೆಲ ಸಮಯ ಕಳೆಯುವುದರ ಮೂಲಕ ಅವರುಗಳಿಗೆ ಜಾನಪದ ಹಾಡುಗಳ ಹಾಗೂ ಕೆಲವೊಂದು ಆಟಗಳನ್ನು ಆಡಿಸುವ ಮೂಲಕ ಸಂತೋಷವನ್ನು ನೀಡಿ ಅವರೊಂದಿಗೆ ಸುಂದರ ಕ್ಷಣಗಳನ್ನು ಕಳೆದರು.

ಕಾಮಧೇನು ವೃದ್ದಾಶ್ರಮದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅವರೊಂದಿಗೆ ಕ್ಲಬ್ಬಿನ ಸದಸ್ಯರು ಎಲ್ಲರೂ ಸೇರಿ ಭೋಜನವನ್ನು ಸವಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾಗಿ ರೊಟೇರಿಯನ್ ಜಯರಾಮ್ ಅವರು ಕಾಮಧೇನು ಸಂಸ್ಥೆಯ ಬಗ್ಗೆ ತಿಳಿಸಿ, ಚರ್ಟರ್ ಪ್ರೆಸಿಡೆಂಟ್ ರತೀ ಅವರು ಡಾಕ್ಟರ್ ಗುರುರಾಜ ಹೆಬ್ಬಾರ್ ಅವರನ್ನು ಸ್ಮರಿಸಿ ಸಮಾಜ ಸೇವೆಗೆ ಅವರು ಹಾಕಿಕೊಟ್ಟ ಅಡಿಪಾಯ ನಮಗೆ ಉತ್ತಮ ಕೆಲಸಗಳನ್ನು ಮಾಡಲು ಉತ್ತೇಜನವನ್ನು ನೀಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಹಾಸನ್ ಗೋಲ್ಡ್ ನ ಅಧ್ಯಕ್ಷರಾದ ಆಡಿ ತನುಜ ರವರು ಮಾತನಾಡಿ, ಆಶ್ರಮ ವಾಸಿಗಳ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ನ ಕಾರ್ಯದರ್ಶಿ ವನಿತಾ ರವರು ಉಪಸ್ಥಿತರಿದ್ದರು, ಹಾಗೆಯೇ ಸಂಸ್ಥೆಯ ಕೆಲವು ಸದಸ್ಯರು ಅವರನ್ನು ಉದ್ದೇಶಿಸಿ ಹಿತನುಡಿಗಳನ್ನು ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *