ಸಕಲೇಶಪುರ : ತಾಲ್ಲೂಕಿನಲ್ಲಿನ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಗಡೀಪಾರು ಮಾಡಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡಿಯುತ್ತಿರುವ ದೌರ್ಜನ್ಯ ಕೊಲೆಗಳು ಹಾಗೂ ಮಂದಿರ ದ್ವoಸದ ಬಗ್ಗೆ ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿ ಬಾಂಗ್ಲಾ ಹಿಂದೂಗಳ ರಕ್ಷಣೆ ನೀಡಬೇಕು ಎಂದು ಬಜರಂಗದಳ ಕಾರ್ಯಕರ್ತರು ಮನವಿ ಸಲ್ಲಿಸಿದರು

ಬಾಂಗ್ಲಾದೇಶದಲ್ಲಿ ನಡಿಯುತ್ತಿರುವ ಅರಾಜುಕಥೆಯಲ್ಲಿ ಬಾಂಗ್ಲಾ ಮುಸ್ಲಿಮರು ಅಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡವುದು ಬೆಂಕಿ ಹಾಕಿ ಸುಡುತ್ತಿರುವುದು ನಡಿಯುತಿದ್ದು. ಬಾಂಗ್ಲಾ ದೇಶದಲ್ಲಿ ಹಿಂದೂಗಳ ದೇವಸ್ಥಾನ ದ್ವಂಸ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿರುವುದು ನಾಗರೀಕ ಸಮಾಜವೇ ತಲೆ ತಗ್ಗಿಸುವಂಥದ್ದು.

ವಿಕೃತ ಮನಸ್ಸಿನ ಯುವಕರು ಬಾಂಗ್ಲಾದ ಮಾಜಿ ಪ್ರಧಾನಿ ಮನೆಗೆ ನುಗ್ಗಿ ಮಾಡುತ್ತಿರುವ ದಾಂಧಲೆ ಸಾಕ್ಷಿಯಾಗಿದ್ದು ಹಿಂದೂಗಳ ಪರಿಸ್ಥಿತಿ ಬದುಕಲು ಆಗದ ರೀತಿ ಆಗಿದ್ದು. ಈ ಕೂಡಲೇ ರಾಜತಂತ್ರಿಕ ವಿಷಯದ ಬಗ್ಗೆ ಚರ್ಚೆ ಮಾಡಿ ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗೆ ಸೂಕ್ತ ಕ್ರಮ ಜರುಗಿಸಬೇಕು

ಹಿಂದೂಗಳ ಮೇಲೆ ನಡಿಯುತ್ತಿರುವ ದೌರ್ಜನ್ಯ ಶಾಶ್ವತವಾಗಿ ನಿಲ್ಲಬೇಕು. ಹಿಂದೂ ಮಠ ಮಂದಿರಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ. ಸಕಲೇಶಪುರ ಉಪವಿಭಾಗಾಧ ಪೋಲಿಸ್ ಅಧೀಕ್ಷಕರಿಗೆ ಸಕಲೇಶಪುರ ತಾಲ್ಲೂಕಿನ ಕಾಪಿ ತೋಟಗಳಲ್ಲಿ ಸೇರಿದಂತೆ ಇತ್ತಿಚಿನ ದಿನಗಳಲ್ಲಿ ಸಕಲೇಶಪುರ ನಗರದಲ್ಲಿ ನಡೆಯುವ ಸಂತೆಯಲ್ಲಿ ಕೂಡ ಇವರು ಪಾಲ್ಗೊಂಡು ವ್ಯಾಪಾರ ಮಾಡುತ್ತಿದ್ದು ಕರ್ನಾಟಕ ರಾಜ್ಯದಾದ್ಯಂತ ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚಾಗಿ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ಬೆಂಗಳೂರಿನಂತಹ ಮಹಾ ನಗರದಲ್ಲಿ ಇವರಿಗೆ ನಕಲಿ ಆಧಾರ್ ಕಾರ್ಡ್ ಮಾಡಿ ಕೊಡುವ ವ್ಯವಸ್ಥಿತ ತಂಡಗಳಿದ್ದು ದೇಶದ ಅಂತರೀಕ ಭದ್ರತೆ ದೃಷ್ಟಿಯಿಂದ ಮಾರಕವಾಗಿದ್ದಾರೆ. ಇವರನ್ನು ಗುರುತಿಸಿ ತಕ್ಷಣ ದೇಶದಿಂದ ಗಡೀಪಾರು ಮಾಡಬೇಕೆಂದು ಬಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ರಾಜ್ಯ ಮುಖಂಡ ರಘು ಸಕಲೇಶಪುರ ಸೇರಿದಂತೆ ಬಜರಂಗದಳದ ಹಾಸನ ಜಿಲ್ಲಾ ಸಹಸಂಯೋಜಕ್ ಕೌಶಿಕ್ ಹೆಚ್.ಎಂ. ಕಬ್ಬಿನಗದ್ದೆ ಮಂಜು. ಬಜರಂಗದಳದ ಶ್ರೀ ಜಿತ್ ಗೌಡ. ವಿಜಿತ್ ಗೌಡ. ಹೆಬ್ಬಸಾಲೆ ರವಿ. ಸೇರಿದಂತೆ ಕಾರ್ಯಕರ್ತರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *