ಸಕಲೇಶಪುರ :ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ಅಂಗನವಾಡಿಯ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಮಾನವ ಬಂಧುತ್ವ ವೇದಿಕೆಯ ವತಿಯಿಂದ ಹಾಲು ಹಾಗೂ ಬಿಸ್ಕೆಟ್ ನೀಡುವ ಮೂಲಕ ಬಸವ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಾಜಿ ಪುರಸಭೆ ಅದ್ಯಕ್ಷ ಹಾಗೂ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಕಾಡಪ್ಪ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಹಾಲು ಹಾಗೂ ಬಾಸ್ಕೆಟ್ ಹಂಚುವ ಮೂಲಕ ಆಚಣೆ ಮಾಡಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಗರ ಪಂಚಮಿ ದಿವಸ ದೇಶಾದ್ಯಂತ ಹಾಲು ಕುಡಿಯದ ಹಾವಿನ ಹುತ್ತಕ್ಕೆ ಹಾಲು ಸುರಿಯುವ ಮೂಲಕ ಮೌಡ್ಯತೆಯಲ್ಲಿ ಇರುವ ಜನರನ್ನು ಮೌಡ್ಯದಿಂದ ಹೊರತರುವ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿದೆ,ಹಾವು ಒಂದು ಸರಿಸೃಪ ಪ್ರಾಣಿ ಅದು ಹಾಲು ಕುಡಿಯುವುದಿಲ್ಲ ಅದೊಂದು ಮಾಂಸಹಾರಿ ಪ್ರಾಣಿಯಾಗಿದ್ದು ಹುತ್ತಕ್ಕೆ ಹಾಲು ಹಾಕಿದರೆ ಇರುವೆಗಳು ಸೇರಿಕೊಂಡು ಹಾವಿನ ಜೀವಕ್ಕೆ ಹಾನಿ ಮಾಡುವ ದೃಷ್ಠಿಯಿಂದ ಭೂಮಿಗೆ ಚೆಲ್ಲುವ ಹಾಲನ್ನು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡುವ ಮೂಲಕ ಮಾನವ ಬಂಧುತ್ವ ವೇದಿಕೆ ಹಲವಾರು ವರ್ಷಗಳಿಂದ ಇಂತಹ ಕಾರ್ಯಕ್ರಮವನ್ನು ಮಾಡುವ ಸಮಾಜದಲ್ಲಿ ಇರುವ ಮೂಡನಂಬಿಕೆಯನ್ನು ಹೋಗಲಾಡಿಸಲು ಸಾಧ್ಯ ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಜೈಭೀಮ್ ಮಂಜು, ತಿಮ್ಮಯ್ಯ, ಎಸ್.ಬಿ.ಮಂಜುನಾಥ್, ಕುಮಾರಸ್ವಾಮಿ, ಅಂಗನವಾಡಿ ಕಾರ್ಯಕರ್ತೆ ಶಾರದಾ,ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *