
ಸಕಲೇಶಪುರ – KA05P0287 MARUTHI SUZUKI 800 ಕಾರಿನಲ್ಲಿ ಗೋವಿನ ಮಾಂಸ ಸಾಗಿಸುತ್ತಿದ್ದ ಮಾಹಿತಿ ಪಡೆದಿದ್ದ ಪೋಲಿಸರು ನಗರ ಬೈಪಾಸ್ ರಸ್ತೆಯಲ್ಲಿ ಹಾಸನ ಭಾಗದಿಂದ ಬರುತ್ತಿದ್ದ ಕಾರನ್ನು ತಡೆದು ಪರಿಶೀಲನೆ ಮಾಡಿದಾಗ ಕಾರಿನ ಹಿಂಭಾಗದಲ್ಲಿ ಮೂಟೆ ಇರುವುದು ಕಂಡುಬಂದಿದೆ.
ಅಂದಾಜು 150 ಕೆ.ಜಿ ಅಷ್ಟು ಗೋವಿನ ಮಾಂಸ ಇದ್ದು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಸಲ್ಮಾನ್ ಖುರೇಷಿ ಸೇರಿದಂತೆ ಇನ್ನೋರ್ವನನ್ನು ಬಂಧಿಸಲಾಗಿದೆ. KA05P0287 Maruthi 800 ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
