ಬೇಲೂರು : ವಿಶ್ವಪಾರಂಪಾರಿಕ ಪಟ್ಟಿಗೆ ಈಗಾಗಲೇ ಬೇಲೂರು ಶ್ರೀ ಚನ್ನಕೇಶವ ದೇಗುಲ ಹಾಗೂ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ವಿಶ್ವಮಾನ್ಯತೆ ಪಡೆದಿದ್ದು ದೇವಾಲಯಕ್ಕೆ ಯುನೆಸ್ಕೋ ನಿರ್ದೇಶಕರಾದ ಪ್ಯಾರಿಸ್ ನ ಡಾ,ಲಜಾರೇ ಪ್ಲೊನಡ್ಯೂ ಆಸಾಮೊ ಹಾಗೂ ಎಲಿಜಬೆತ್ ಕ್ರಿಸ್ಟೇನ್ ಗ್ಯೂಮೊಸ್ ಭೇಟಿ ನೀಡಿ ಶಿಲ್ಪಕಲೆಯನ್ನು ಕಣ್ಣು ತುಂಬಿಕೊಂಡು ವಿಶ್ವ ವಿಖ್ಯಾತ ದೇಗುಲಗಳು ಯುನೆಸ್ಕೋ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅವರು ಇದೊಂದು ವಿಶಿಷ್ಠ ಶಿಲ್ಪಕಲೆಯಯನ್ನು ಹೊಂದಿರುವ ದೇಗುಲ ಅತ್ಯತ್ಭುತವಾದ ಕಲೆ,ನಾಟ್ಯ ಸೇರಿದಂತೆ ಎಲ್ಲಾ ಕಲಾಕೃತಿಗಳಿಂದ ವಿಶ್ವದ ಹಲವು ಭಾಗಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.

೨೦೨೩ ರಲ್ಲಿ ಯುನೆಸ್ಕೊ ವಿಶ್ವಪಾರಂಪಾರಿಕ ಪಟ್ಟಿಗೆ ಹೊಯ್ಸಳೇಶ್ವರ ದೇವಾಲಯವಾದ ಬೇಲೂರು ಮತ್ತು ಹಳೆಬೀಡನ್ನು ಪಟ್ಟಿಗೆ ಸೇರ್ಪಡೆಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ವಿಶ್ವ ಮಾನ್ಯತಾ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ.

ಪ್ರತಿನಿತ್ಯ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲು ಮಾಹಿತಿಯನ್ನು ನೀಡಲು ಇಲ್ಲಿಗೆ ಬಂದಿದ್ದು ಮೊದಲ ಹಂತದಲ್ಲಿ ಪರಿಶೀಲನೆ ಮಾಡಿದ್ದು ಎರಡನೇ ಹಂತದಲ್ಲಿ ಸಂಪೂರ್ಣ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಇಲ್ಲಿ ಯಾವ ರೀತಿ ತಾಣವನ್ನಾಗಿ ಹೆಚ್ಷಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದೇವೆ ಎಂದರು.

ನಂತರ ಮಾತನಾಡಿದ ಯುನೆಸ್ಕೋ ಉಪ ಆಯುಕ್ತರಾದ ಜ್ಯೋತಿ ಹೊಸಾಗ್ರಹಾರ ವಿಶ್ವಮಾನ್ಯತೆ ಪಟ್ಟಿಯ ೪೬ ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದು ಬೇಲೂರು ಹಳೆಬೀಡು ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿರುವುದರಿಂದ ಸ್ಥಳೀಯ ಅಧಿಕಾರಿಗಳ ಹಾಗೂ ದೇಗುಲಗಳ ಸಂಕ್ಷಿಪ್ತ ಮಾಹಿತಿ ದೇವಾಲಯದ ಅಕ್ಕಪಕ್ಕ ಯಾವ ರೀತಿ ಅಭಿವೃದ್ಧಿ ಪಡಿಸಬೇಕೆಂಬ ಮಾಹಿತಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು ಅದನ್ನು ಪರಿಶೀಲಿಸಲು ಇಲ್ಲಿಗೆ ಬಂದಿದ್ದೇವೆ.

ಇದೊಂದು ವಿಶಿಷ್ಠವಾದ ಕಲಾಕೃತಿ ಹೊಂದಿರುವ ಅದ್ಭುತವಾದ ದೇವಾಲಯ ಇದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದರು.

ಇದೇ ವೇಳೆ ದೇವಾಲಯಕ್ಕೆ ಮತ್ತು ಹಾಗೂ ಪ್ರವಾಸೋದ್ಯಮ ಇಲಾಖೆಗೆ ಯಾವ ರೀತಿ ಅಭಿವೃದ್ಧಿ ಆಗಬೇಕು ಎಂಬುವುದರ ಬಗ್ಗೆ ಆಯುಕ್ತರಿಗೆ ತಹಶಿಲ್ದಾರ್ ಎಂ ಮಮತಾ ಹಾಗೂ ದೇವಾಲಯದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಡಾ ನಾರಾಯಣಸ್ವಾಮಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪುರಾತತ್ವ ಇಲಾಖೆಯ ಗೌತಮ್,ನಾಗರಾಜ್,ಜ್ಞಾನೇಶ್,ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಯೊಗೇಶ್,ತಾಪಂ ಇಒ ಸತೀಶ್,ವೃತ್ತ ನಿರೀಕ್ಷಕ ಸುಬ್ರಹ್ಮಣ್ಯ, ಪಿಎಸ್ಐ ಪ್ರವೀಣ್ ಕುಮಾರ್,ಡಾ.ಶ್ರೀವತ್ಸ ಎಸ್ ಟಿ,ಆರೊಗ್ಯಾಧಿಕಾರಿ ಲೋಹಿತ್,ನಾಗರಾಜ್ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *