
ಹಾಸನ: ಸಂಘದ ಹಿರಿಯರು ಆರ್.ಎಸ್.ಎಸ್. ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಹಾಗೂ ಎಮರ್ಜನ್ಸಿ ವೇಳೆ ಒಂದುವರೆ ವರ್ಷಗಳ ಕಾಲ ಜೈಲು ಅನುಭವಿಸಿದ ಪಾರಸ್ ಮಲ್ ೭೫ ವರ್ಷ ಅವರು ಶುಕ್ರವಾರ ಬೆಳಿಗ್ಗೆ ಹೃದಯ ಘಾತದಿಂದ ನಿಧನರಾಗಿದ್ದಾರೆ.
ರಾಷ್ಟ್ರೀಯ ಸ್ವಯಂ ಸೆವಕ ಸಂಘದ ವಿಭಾಗ ಕಾರ್ಯಕಾರಣಿ ಸದಸ್ಯರು ಹಾಗೂ ಪ್ರವೀಣ್ ಸೆಲೆಕ್ಷನ್ ಬಟ್ಟೆ ಅಂಗಡಿ ಮಾಲೀಕರಾದ ಪಾರಸ್ ಮಲ್ ಇವರಿಗೆ ಪತ್ನಿ ಇಬ್ಬರು ಗಂಡು ಮಕ್ಕಳು ಇದ್ದು, ಸಂಘದ ಹಿರಿಯರು, ಕಠಿಣ ಸಂಧರ್ಭದಲ್ಲಿ ಹಾಸನದಲ್ಲಿ ಆರ್.ಎಸ್.ಎಸ್.ನ ಸಕ್ರಿಯ ಕಾರ್ಯಕರ್ತರಾಗಿ ರಾಷ್ಟ್ರಕಾರ್ಯದಲ್ಲಿ ಪಾದರಸದಂತೆ ಓಡಾಟ ಮಾಡುತ್ತಿದ್ದರು.
ಇವರ ಪಾರ್ಥಿವ ಶರೀರವನ್ನು ರಸ್ತೆ, ಗಾಂಧಿ ಬಜಾರ್ ನಿವಾಸದಲ್ಲಿ ಸಂಜೆವರೆಗೂ ಇಡಲಾಗಿತ್ತು. ನಂತರ ನಗರದ ಗೊರೂರು ರಸ್ತೆಯಲ್ಲಿರುವ ಬಿಟ್ಟಗೌಡನಹಳ್ಳಿ ಸ್ಮಶಾನದಲ್ಲಿ ಕುಟುಂಬದವರು ಅಂತ್ಯ ಸಂಸ್ಕಾರ ನೆರವೇರಿಸಿದರು.
ಅಂತಿಮ ಕ್ರೀಯೆಯಲ್ಲಿ ಪಾರಸ್ ಜಿ ಸ್ನೇಹಿತರು ಹಾಗೂ ಹಾಸನ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ, ಶಾಸಕರಾದ ಹುಲ್ಲಹಳ್ಳಿ ಸುರೇಶ್, ಶಾಸಕರಾದ ಸಿಮೆಂಟ್ ಮಂಜು, ಮಾಜಿ ಶಾಸಕರಾದ ಪ್ರೀತಂ ಗೌಡರು, ಅರ್.ಎಸ್ .ಎಸ್. ವಿಭಾಗದ ಸಹ ಕಾರ್ಯದರ್ಶಿ ವಿಜಯಕುಮಾರ್, ನಿರ್ಮಲಾನಂದ ಸುರಾನಾ, ಆರ್.ಎಸ್.ಎಸ್. ನ ಮುಖಂಡರಾದ ಲಾ.ನಾ. ಶಾಸ್ತ್ರಿ, ಅರಸೀಕೆರೆ ಸತ್ಯಣ್ಣ, ವಿ.ಹೆಚ್.ಪಿ. ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಹಾಗೂ ಸಾವಿರಾರು ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.

