
ಸಕಲೇಶಪುರ : ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಯು ಎಂ ಪ್ರಕಾಶ್ ಕುಮಾರ್ ರವರು ಕೃಷಿ ಇಲಾಖೆ ವತಿಯಿಂದ ವಿವಿಧ ಯೋಜನೆಯಡಿ ರೈತರಿಗೆ ದೊರಕುವ ಸೌಲಭ್ಯದ ಬಗ್ಗೆ ಹಾಗೂ ಈ ವರ್ಷದ ಮಳೆಯ ಬಗ್ಗೆ ಸಂಪೂರ್ಣ ವಿವರ ನೀಡಿರುತ್ತಾರೆ.
ಸಕಲೇಶಪುರದ ತಾಲೂಕಿನ ನಾದ್ಯಂತ ಪ್ರತಿ ವರ್ಷಕ್ಕಿಂತ ಈ ವರ್ಷ ವಾಡಿಕೆ ಮಳೆ 1521.2 ಮಿಲಿಮೀಟರ್ ಗಳಷ್ಟು ಇತ್ತು ಆದರೆ ಪ್ರಸ್ತುತ 2024-25 ನೇ ಸಾಲಿನಲ್ಲಿ ಇಲ್ಲಿಯವರೆಗೆ ಆಗಿರುವಂತಹ ಮಳೆ ವಿವರ 2757.1 ಮಿಲಿಮೀಟರ್ ನಷ್ಟು ವಾಡಿಕೆ ಮಳೆ ಗಿಂತ ಹೆಚ್ಚು ಮಳೆಯಾಗಿದ್ದು, ಶೇಕಡ 81 % ರಷ್ಟು ಮಳೆಯಾಗಿರುವುದು ವರದಿಯಾಗಿರುತ್ತದೆ. ಈ ವರ್ಷ 7500 ಹೆಕ್ಟರ್ ನಷ್ಟ ಬೆಳೆ ವಿಸ್ತಿರ್ಣ ಸಂಬಂಧಿಸಿದಂತೆ ಈಗಾಗಲೇ 3325 ಹೆಕ್ಟರ್ ನಷ್ಟು 44.33 ಕ್ರಮಾಂಕದಷ್ಟು ಬೆಳೆ ಬಿತ್ತನೆಯಾಗಿರುತ್ತದೆ, ಹೆಚ್ಚುವರಿ ಮಳೆಯಿಂದಾಗಿ ಸುಮಾರು 333 ಹೆಕ್ಟರ್ ಭತ್ತದ ಬೆಳೆ ಪ್ರಮಾಣದಲ್ಲಿ ನಷ್ಟವಾಗಿರುತ್ತದೆ.
ಅದರಲ್ಲಿ ಕಸಬಾ 80 ಹೆಕ್ಟರ್ ಬೆಳಗೋಡು 50, ಹೆತ್ತೂರ 58 ಯಸಳೂರು 70, ಹಾನುಬಾಳು 75, ಹೆಕ್ಟರ್ ನಷ್ಟು ನಷ್ಟ ವಾಗಿರುತ್ತದೆ. ಈ ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆಗೆ ರೈತ ಬಾಂಧವರು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿಯನ್ನು ಸಲ್ಲಿಸ ಬೇಕಾಗಿ ತಿಳಿಸಿರುತ್ತಾರೆ.
ಹಾಗೆಯೇ ಕೃಷಿ ಪ್ರಶಸ್ತಿಗೆ ಸಂಬಂಧಪಟ್ಟ ಹಾಗೆ ಉತ್ತಮವಾಗಿ ಭತ್ತದ ಬೆಳೆಯನ್ನು ಬೆಳೆದ ರೈತರಿಗೆ ಪ್ರಶಸ್ತಿ ಪಡೆಯಲು ಉಚಿತವಾಗಿ ಆನ್ ಲೈನ್ ನಲ್ಲಿ ನೋಂದಣಿ ಮಾಡಲು ಅವಕಾಶ ಇರುತ್ತದೆ. ಸಾಮಾನ್ಯ ಸೇವಾ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳಲು ಅವಕಾಶ ಇರುತ್ತದೆ.
ತಾಲೂಕು ಮಟ್ಟದಲ್ಲಿ ವಿಜೇತರಾದವರಿಗೆ 15000 ರೂಗಳು ಜಿಲ್ಲಾಮಟ್ಟದಲ್ಲಿ ವಿಜೇತರಾದವರಿಗೆ 30,000 ರೂಗಳು ರಾಜ್ಯಮಟ್ಟದಲ್ಲಿ 50,000 ರೂಗಳಿ ನಸ್ಟು ಬಹುಮಾನ ಪಡೆಯಲು ಅವಕಾಶ ಇರುತ್ತದೆ.
ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಲು ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿದಂತೆ ವಿವಿಧ ಯಂತ್ರೋಪಕರಣಗಳು, ಟಾರ್ಪಲ್ ಗಳು ಪಡೆಯಲು, ಕೃಷಿ ಹೊಂಡ ಹೂಳೆತ್ತಲು, ಕೃಷಿ ಹೊಂಡ ನಿರ್ಮಿಸಲು, ಅರ್ಜಿ ಆಹ್ವಾನಿಸಲಾಗಿದೆ. ರೈತ ಬಾಂಧವರು ಇದರ ಸದುಪಯೋಗ ಪಡೆಯಬೇಕಾಗಿ ಸಹಾಯಕ ಕೃಷಿ ನಿರ್ದೇಶಕರಾದ ಯು ಎಂ ಪ್ರಕಾಶ್ ಕುಮಾರ್ ಹಾಗೂ ತಾಂತ್ರಿಕ ಅಧಿಕಾರಿಯಾದ ಅಜಿತ್ ಪ್ರಸಾದ್ ಹೆಚ್ ಎನ್ ತಿಳಿಸಿರುತ್ತಾರೆ.
