ಬೇಲೂರು : ಜೆಪಿನಗರದ ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ರಾತ್ರಿ ೭-೩೦ ರ ಸಮಯದಲ್ಲಿ ದಿಡೀರ್ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳಿಂದ ಅಹವಾಲು ಸ್ವೀಕರಿಸಿದ ನ್ಯಾಯಾಧೀಶರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.

ಈ ವೇಳೆ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ವಿಶ್ರಾಂತಿ ,ಕೋಣೆ ದಾಸ್ತಾನು ಕೊಠಡಿ ,ಹಾಗೂ ಅಡಿಗೆ ಕೋಣೆ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಊಟವನ್ನು ಸ್ವೀಕರಿಸಿದರು.

ಈ ವೇಳೆ ಅಡುಗೆ ಸಿಬ್ಬಂದಿಗಳಿಗೆ ಕಠಿಣವಾಗಿ ತಾಕೀತು ಮಾಡಿದ ನ್ಯಾಯಾದೀಶರು ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗಾಗಿ ಸರ್ಕಾರ ಹಲವಾರು ರೀತಿಯ ಸವಲತ್ತುಗಳನ್ನು ನೀಡುತ್ತಿದೆ.ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.ನಿಮ್ಮ ಇಷ್ಟದ ಹಾಗೇ ರುಚಿ ಶುಚಿ ಇಲ್ಲದ ಆಹಾರ ನೀಡುವುದು ಮೊದಲು ಬಿಡಬೇಕು.ವಿದ್ಯಾರ್ಥಿಗಳಿಗೆ ಶುಚಿ ರುಚಿಯಾದ ಆಹಾರ ನೀಡಬೇಕು.ಮೊದಲು ನೀವು ಸ್ವಚ್ಚತೆಗೆ ಆದ್ಯತೆ ನೀಡಬೇಕು.

ಇಲ್ಲಿರುವ ಎಲ್ಲಾ ವಿದ್ಯಾರ್ಥಿನಿಯರು ನಿಮಗೆ ಮಕ್ಕಳಿದ್ದಂತೆ ನಿಮ್ಮ ಮಕ್ಕಳನ್ನು ಯಾವ ರೀತಿ ಸಲಹುತ್ತೀರಾ ಅದೇ ರೀತಿ ಇಲ್ಲಿಯ ವಿದ್ಯಾರ್ಥಿಗಳನ್ನು ಪೋಷಕರಂತೆ ಸಲಹಬೇಕು.ವಿದ್ಯಾರ್ಥಿನಿಯರು ತಪ್ಪು ಮಾಡಿದಾಗ ಮೇಲಾಧಿಕಾರಿಗಳಿಗೆ ತಿಳಿಸಿ ಎಚ್ಚರಿಕೆ ನೀಡಬೇಕೆ ಹೊರತು ಅವರನ್ನು ಏಕವಚನದಲ್ಲಿ ಬೈಯಬಾರದು .ಸರ್ಕಾರ ನೀಡುವಂತಹ ಪೋಷಕಾಂಶ ಆಹಾರವನ್ನು ಸರಿಯಾಗಿ ಕೊಡಬೇಕು ಎಂದು ಎಚ್ಚರಿಕೆ ನೀಡಿದರು.

*ವಿದ್ಯಾರ್ಥಿನಿಯರಿಗೆ ಕಿವಿ ಮಾತು*

ಪೋಷಕರು ನಿಮ್ಮನ್ನು ಕೂಲಿ ಮಾಡುವ ಮೂಲಕ ನಿಮಗೆ ಉತ್ತಮ ವಿದ್ಯಾಭ್ಯಾಸ ನೀಡಿಸುತ್ತಿದ್ದಾರೆ.ಅವರ ಒಳ್ಳೆಯತನ ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳಬಾರದು ನಿಮ್ಮ ಗಮನ ಓದಿನ ಕಡೆಗೆ ಹೆಚ್ಚಿನ ಗಮನ ನೀಡುವ ಮೂಲಕ ನಿಮ್ಮ ಪೋಷಕರ ಕನಸನ್ನು ನನಸು ಮಾಡುವ ಕೆಲಸ ಮಾಡಬೇಕು.ನಿಮಗೆ ಯಾರಿಂದಲಾದರೂ ತೊಂದರೆಯಾದರೆ ನಮ್ಮ ನ್ಯಾಯಾಲಕ್ಕೆ ನೇರವಾಗಿ ದೂರನ್ನು ನೀಡಿದರೆ ನಿಮ್ಮ ಹೆಸರನ್ನು ಗೌಪ್ಯವಾಗಿಟ್ಟು ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆಂದು ಎಚ್ಚರಿಸಿದರು.

ವಿದ್ಯಾರ್ಥಿಗಳಿಂದ ಸಮಸ್ಯೆಗಳ ಬಗ್ಗೆ ಪತ್ರದ ಮೂಲಕ ಮಹಿತಿ ಪಡೆದ ನ್ಯಾಯಾಧೀಶರು ವಾರ್ಡ್ ನ್ ವೀಣಾ ಅವರಿಗೆ ಮಾಹಿತಿ ನೀಡಿ ಸರ್ಕಾರ ನೀಡಿರುವ ಚಪಾತಿ ಮಾಡವ ಯಂತ್ರದಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗದೆ ಇರುವುದರಿಂದ ಅದನ್ನು ಉಪಯೋಗಿಸದಂತೆ ಸೂಚಿಸಿದರಲ್ಲದೆ ಇದನ್ನು ತೆರವು ಮಾಡುವಂತೆ ಮೇಲಾಧಿಕಾರಿಗಳಿಗೆ ಸೂಚಿಸುತ್ತೇವೆ.

ಅಡುಗೆ ಸಿಬ್ಬಂದಿಯವರಿಗೆ ಸ್ವಚ್ಚತೆ ಜೊತೆಗೆ ಗುಣಮಟ್ಟದ ಆಹಾರ ನೀಡುವಂತೆ ಎಚ್ಚರಿಕೆ ವಹಿಸಬೇಕು.ವಿದ್ಯಾರ್ಥಿ ನಿಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾ ವಹಿಸಬೇಕು.ಪ್ರತಿನಿತ್ಯ ಆಹಾರ ಗುಣಮಟ್ಟವನ್ನು ವಿದ್ಯಾರ್ಥಿನಿಯರಿಂದ ಪಡೆಯುವಂತೆ ಸೂಚಿಸಿದರಲ್ಲದೆ ಸರಿಯಾದ ರೀತಿಯಲ್ಲಿ ಅಡುಗೆ ಮಾಡದವರ ಮೇಲೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೆ ಎಂದರು.

ಈ ಸಂದರ್ಭದಲ್ಲಿ ವಾರ್ಡ್ ನ್ ವಿಣಾ,ಎಎಸ್ಐ ಚಂದ್ರು,ನ್ಯಾಯಾಲಾಯದ ಹಮೀಲುದಾರರಾದ ಪ್ರಕಾಶ್,ಸಿಬ್ಬಂದಿ ಗಿರಿಯಪ್ಪ,ಹಾಗೂ ರಮ್ಯ ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *