
ಸಕಲೇಶಪುರ : ಪ್ರತಿ ವರ್ಷ ಜುಲೈ 26 ರಂದು ಆಚರಿಸಲಾಗುವ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮನ್ನು ಜುಲೈ 26 ರಂದು ಆಚರಿಸಬೇಕಾಗಿತ್ತು ಆದರೆ ತಾಲೂಕಿನಲ್ಲಿ ಅತಿಯಾದ ಮಳೆಯ ಕಾರಣದಿಂದ ಅಂದು ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಮಾಡಲು ಸಾದ್ಯವಾಗದ ಕಾರಣ ಇಂದು ಮಕ್ಕಳು ಸಾಮೂಹಿಕವಾಗಿ ಸೈನಿಕರ ಸಮವಸ್ತ್ರವನ್ನು ಧರಿಸುವ ಮೂಲಕ ರೋಟರಿ ಸಂಸ್ಥೆಯ ನರ್ಸರಿ ವಿಭಾಗದ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಸಮವಸ್ತ್ರದೊಂದಿಗೆ ಉತ್ಸಾಹದಿಂದ ಭಾಗವಹಿಸಿದ್ದರು
1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಗೌರವಿಸಲಾಗುತ್ತದೆ. ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಪ್ರತಿ ವರ್ಷ ಮಕ್ಕಳಿಗೆ ಪರಿಚಯಿಸುವದೃಷ್ಟಿಯಿಂದ ಕಾರ್ಗಿಲ್ ವಿಜಯ್ ದಿವಸ್ , ಆಚರಿಸಲಾಗುತ್ತಿದ್ದು ಇದು ಭಾರತದ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ ಎಂದು ಹೇಳಬಹುದಾಗಿದೆ.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಸಂಘದ ಅದ್ಯಕ್ಷ ಟಿ.ಪಿ.ಕೃಷ್ಣಪ್ಪ, ಉತ್ತಯ್ಯ ಧರ್ಮಪ್ಪ, ಹರೀಶ್ ,ಚಂದ್ರಶೇಖರ್, ರೋಟರಿ ನರ್ಸರಿ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪ ಪೊನ್ನಪ್ಪ ಹಗೂ ಇತರ ಸಹ ಶಿಕ್ಷಕರು ಹಾಜರಿದ್ದರು.



