
ಚನ್ನರಾಯಪಟ್ಟಣ : ಹಿರೀಸಾವೆ ಹೋಬಳಿ ಬೂಕನಬೆಟ್ಟದ ಬಳಿ ಭಾನುವಾರ ಬೆಳಗಿನ ಜಾವ ದರೋಡೆ ಪ್ರಕರಣದ ಆರೋಪಿ ಸತೀಶ ಎಂಬಾತನ ಮೇಲೆ ಪೋಲಿಸರು ಗುಂಡಿನ ದಾಳಿ ನಡೆಸಿದ್ದಾರೆ.
ಹಿರೀಸಾವೆ ವೃತ್ತದ ನುಗ್ಗೇಹಳ್ಳಿ ಮತ್ತು ಚನ್ನರಾಯಪಟ್ಟಣದ ಬಳಿ ಕಳೆದ ತಿಂಗಳು ಎರಡು ದರೋಡೆ ಪ್ರಕರಣದ ಪ್ರಮುಖ ಆರೋಪಿ ಮಂಡ್ಯ ಜಿಲ್ಲೆಯ ಹಾಡ್ಯ ಗ್ರಾಮದ ಸತೀಶ
ಈತ ಕಳೆದ ನಾಲ್ಕು ವರ್ಷದಿಂದ ಹಿರೀಸಾವೆಯಲ್ಲಿ ವಾಸ ಇದ್ದ ಪೋಲಿಸರಿಗೆ ಖಚಿತ ಮಾಹಿತಿ ಮೇರೆಗೆ ಬೂಕನಬೆಟ್ಟದ ಬಳಿ ಬಂಧಿಸಲು, ಹೋದಾಗ, ಪೋಲಿಸರ ಮೇಲೆ ದಾಳಿ ಮಾಡಿದ್ದಾನೆ.
ಈ ಸಮಯದಲ್ಲಿ ಅತ್ಮರಕ್ಷಣೆಗಾಗಿ ಚನ್ನರಾಯಪಟ್ಟಣ ನಗರ ಠಾಣೆ PSI ಭರತ್ ಕುಮಾರ್ ರೆಡ್ಡಿ ಪೈರ್ ಮಾಡಿದ್ದಾರೆ. ಆರೋಪಿಯ ಕಾಲಿಗೆ ಗುಂಡು ತಗುಲಿದೆ. ಹಿರೀಸಾವೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೋಡಿಸಿ, ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳುಹಿಸಲಾಗಿದೆ.
ಆರೋಪಿಯನ್ನು ಬಂಧಿಸುವ ಸಮಯದಲ್ಲಿ ಆರೋಪಿಗೆ ಶರಣಗುವಂತೆ ಎಚ್ಚರಿಕೆ ನೀಡಿದಾಗ ಆರೋಪಿ ಸತೀಶ ಕ್ರೈಂ ಪೊಲೀಸ್ ಪುಟ್ಟರಾಜು ಎಂಬ ಸಿಬ್ಬಂದಿಗೆ ಡ್ರ್ಯಾಗನ್ ನಿಂದ ಹಲ್ಲೆ ಪಡಿಸಿದ್ದು , ಈ ಸಂದರ್ಭದಲ್ಲಿ PSI ಭರತ್ ಕುಮಾರ್ ರೆಡ್ಡಿ ಆತ್ಮ ರಕ್ಷಣೆಗೆ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ ಹಿರೀಸಾವೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ಹಿರೀಸಾವೆ ಸಿಪಿಐ ಸಂತೋಷ ರವರು ತಿಳಿಸಿದರು.
DYSP ರವಿಪ್ರಸಾದ್ ರವರ ಮಾರ್ಗದರ್ಶನದಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಪಿಐ ರಘುಪತಿ ನೇತೃತ್ವದಲ್ಲಿ ಆರೋಪಿಗಳ ತಂಡ ರಚಿಸಲಾಗಿತ್ತು.
ಆರೋಪಿ ಜೊತೆ ಇದ್ದ ಮೂರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಕಳೆದ ವಾರ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸ್ ರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

