
ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಮಾಡಳು ಗ್ರಾಮದ ಇತಿಹಾಸ ಪ್ರಸಿದ್ಧ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿಯವರ ನೂತನ ದೇವಾಲಯ ಕಟ್ಟಡ ಕಾಮಗಾರಿಗೆ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಜಗದ್ಗುರು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿ ಶಂಕುಸ್ಥಾಪನೆಯನ್ನು ನೆರವೇರಿಸಿದರು
ಬೆಳಿಗ್ಗೆ ಮಹಿಳೆಯರು ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರ ಸಮ್ಮುಖದಲ್ಲಿ ಗಂಗಾ ಪೂಜೆಯನ್ನು ಧಾರ್ಮಿಕ ವಿಧಿ ವಿಧಾನಗಳಿಂದ ಶಾಸ್ತ್ರೋಕ್ತವಾಗಿ ನೆರವೇರಿಸಿದರು ನಂತರ ಕೋಡಿಮಠದ ಶ್ರೀಗಳವರ ಪಾದಪೂಜೆ ನಡೆಯಿತು ಇದೇ ಸಂದರ್ಭದಲ್ಲಿ ಕಟ್ಟಡ ಕಾಮಗಾರಿಗೆ ಶ್ರೀಗಳು ಶಂಕುಸ್ಥಾಪನೆ ನೆರವೇರಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ ಕಳೆದ ನೂರಾರು ವರ್ಷಗಳಿಂದ ವ್ಯಕ್ತಿ ದೇವತೆಯಂತೆ ಹೆಸರು ಪಡೆದಿರುವ ಶ್ರೀ ಮೂಲಸ್ಥಾನ ಸ್ವರ್ಣ ಗೌರಮ್ಮನವರು ಭಾದ್ರಪದ ಮಾಸದ ತದಿಗೆ ದಿನ ಕೋಡಿಮಠದ ಸಂಪ್ರದಾಯದಂತೆ ಅಮ್ಮನವರಿಗೆ ಮಠದ ಪೂಜ್ಯರು ಮೂಗುತಿ ಧರಿಸುವರು 9 ದಿನ ತ್ರಿಕಾಲ ಪೂಜೆ ನಡೆಯುವುದು ಈ ಬಾರಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಶಿಸಿದರು
ಈ ಪೂಜಾ ಕಾರ್ಯಕ್ರಮದಲ್ಲಿ ತಿಪಟೂರು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮುರಿದೇವರು ಕೆಬಿದರೆ ದೊಡ್ಡ ಮಠದ ಶ್ರೀ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು ಗ್ರಾಮದ ಮುಖಂಡರಾದ ಎಂಸಿ ನಟರಾಜ್ ಕೊಡ್ಲಿ ಬಸವರಾಜ್ ಎಂಜಿ ಜಯಪ್ಪ ಎಸ್ ಮಲ್ಲಿಕಾರ್ಜುನಪ್ಪ ಮಾಡಾಳು ಶಿವಲಿಂಗಪ್ಪ ದಲಿತ ಮುಖಂಡರಾದ ಸೋಮಶೇಖರ್ ಚಂದ್ರಪ್ಪ ದಾಸಪ್ಪ ಮುಂತಾದವರು ಭಾಗವಹಿಸಿದ್ದರು
