
ಕೇರಳದ ವಯನಾಡಿನ ಪ್ರಕೃತಿಯ ವಿಕೋಪಕ್ಕೆ ನೂರಾರು ಜನ ಪ್ರಾಣ ಹಾನಿ ಮತ್ತು ನೂರಾರು ಮನೆಗಳು ನೀರಿನಲ್ಲಿ ಕೊಚ್ಚಿ ಹೋದರಿಂದ ಸಂಕಷ್ಟದಲ್ಲಿ ಸಿಲುಕಿರುವ ನಿರಾಶ್ರಿತರಿಗೆ ಸಹಾಯಹಸ್ತ ನೀಡುತ್ತಿರುವ ಮೂಗಲಿ ಸುತ್ತ ಮುತ್ತಲಿನ ಗ್ರಾಮದ ಸಮಾಜ ಸೇವಕರು
ಕೇರಳ ದುರಂತದ ಸಂತ್ರಸ್ತರ ನೆರವಿಗೆ ನಿಂತ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಬೆಳಗೋಡು ಹೋಬಳಿ ಮೂಗಲಿ ಗ್ರಾಮದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಮೋಹನ್ ಗೌಡ ವೆಂಕಟೇಶ್ ಅಂಕಿಹಳ್ಳಿ ಶಿವು ಗಜೇಂದ್ರಪುರ ಸಂಪತ್ ಕುಮಾರ್ ಫಾತಿಮಾಪುರ ಅಭಿ ಶಾಂತನಳ್ಳಿ ನಾಗೇಂದ್ರ ಹೊಸಕೊಪ್ಪಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಾಯ ಹಸ್ತದಿಂದ ಅಕ್ಕಿ ಬೇಳೆ ಕಾಳು ಅಡುಗೆ ಎಣ್ಣೆ ಇತರೆಲ್ಲ ದಿನಸಿ ವಸ್ತುಗಳನ್ನು ಸಂಕಷ್ಟದಲ್ಲಿ ಸಿಲುಕಿರುವಂತ ನಿರಾಶ್ರಿತರಿಗೆ ತಲುಪಿಸುತ್ತಿರುವ ಮೋಹನ್ ಗೌಡ್ ಮೂಗಲಿ ಮತ್ತು ಸ್ನೇಹಿತರಿಗೆ ಊರಿನ ಸುತ್ತಮುತ್ತ ಗ್ರಾಮಸ್ಥರಿಗೆ ನಾಗೇಂದ್ರ ಹೊಸಕೋಪಲು ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ





