ಸಕಲೇಶಪುರ : ಪಟ್ಟಣದಲ್ಲಿ ದಿನೇದಿನೇ ಅಕ್ರಮ ಗೋಸಾಗಾಟ ಹಾಗೂ ಗೋಮಾಂಸ ಸಾಗಾಟ. ನಡೆಯುತ್ತಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಜರಂಗದಳ ಕಾರ್ಯಕರ್ತರ ಮಾಹಿತಿ ಆಧರಿಸಿ ಡಿವೈಎಸ್ಪಿ ಪ್ರಮೋದ್ ರವರ ನೇತೃತ್ವದಲ್ಲಿ ಕುಶಾಲನಗರ ಬಡಾವಣೆಯ ಫರೀದ್ ಮನೆ ಮೇಲೆ ಧಾಳಿ ನಡೆಸಿದ್ದು ಮನೆಯೊಳಗಿನ ನೆಲಮಾಳಿಗೆಯಲ್ಲಿ ರಹಸ್ಯವಾಗಿ ಕಸಾಯಿಖಾನೆ ಮಾದರಿಯಲ್ಲಿ ಕೊಠಡಿಯನ್ನು ಮಾರ್ಪಾಡು ಮಾಡಲಾಗಿತ್ತು.

ರಹಸ್ಯ ಕೊಠಡಿ ಒಳಗೆ ಎರಡು ಗೋವುಗಳನ್ನು ವಧೆ ಮಾಡಲಾಗಿದ್ದು ಸಂಪೂರ್ಣ ಮಾಂಸವನ್ನು ನೇತು ಹಾಕಲಾಗಿತ್ತು. 40 ಕೆ.ಜಿ ಅಷ್ಟು ಗೋವಿನ ಕರುಳು ತ್ಯಾಜ್ಯ ಹಾಗೂ ಬರೊಬ್ಬರಿ 300 ಕೆ.ಜಿ ಗೋಮಾಂಸವನ್ನು ಸಂಗ್ರಹಿಸಿಡಲಾಗಿತ್ತು.

ವಾಸದ ಮನೆಯ ಒಳಗೆ ಕಟಾವು ಮಾಡಿದ್ದು, ರಕ್ತವನ್ನು ಚರಂಡಿಗೆ ಬಿಡಲಾಗುತ್ತಿದ್ದು ಕಾಯಿಲೆಗಳು ಹರಡುತ್ತದೆ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಂ ಬಹುಸಂಖ್ಯಾತ ಕುಶಾಲನಗರ ನಗರ ಬಡಾವಣೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಸೇರುತ್ತಿದ್ದಂತೆ ಪೋಲಿಸರು ಒಂದು ರಿಸರ್ವ್ ವಾಹನವನ್ನು ಸ್ಥಳದಲ್ಲಿ ಹಾಕಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು.

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಫರೀದ್ @ ಪಾರ್ರೂ ಮೇಲೆ ನಗರ ಠಾಣೆಯಲ್ಲಿ ಅನೇಕ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ.ಮತ್ತೊಬ್ಬ ಆರೋಪಿ ನಜೀರ್ ತಲೆ ಮರೆಸಿಕೊಂಡಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಸಕಲೇಶಪುರ ವೃತ್ತ ನಿರೀಕ್ಷಕರಾದ ನಿರಂಜನ್ ಕುಮಾರ್, ಎ ಎಸ್ ಐ ಪ್ರಕಾಶ ನಾಯಕ್, ಹೆಡ್ ಕಾನ್ಸ್ಟೇಬಲ್ ರಂಗಸ್ವಾಮಿ, ಸಿಬ್ಬಂದಿಗಲಾದ ಕೃಷ್ಣ ನಾಯಕ್, ಶಿವಕುಮಾರ್, ಯಶ್ವಂತ್, ಮಧು, ಸಂತೋಷ್, ಕೀರ್ತಿ, ಶ್ರೀಧರ್ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *