
ಬೇಲೂರು : ಪಟ್ಟಣದ ಮುಸ್ತಫಾ ಬೀದಿಯಲ್ಲಿ ಅನಾಧಿಕೃತವಾಗಿ ಗೋವುಗಳನ್ನು ಕಡಿದು ಮಾಂಸ ಮಾರಾಟಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ತಹಶಿಲ್ದಾರ್ ಮಮತಾ
ಪುರಸಭೆಯಿಂದ ಯಾವುದೇ ಅನುಮತಿ ಇಲ್ಲದೆ ಅನಾದಿಕೃತವಾಗಿ ಅಂಗಡಿಗಳ ಮುಂಭಾಗ ಬೀಗ ಹಾಕಿಕೊಂಡು ಗೊಮಾಂಸ ಕಡಿಯುತ್ತಿರುವುದನ್ನು ಗಮನಿಸಿದ ಅವರು ಪುರಸಭೆ ಆರೋಗ್ಯಾಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿಯವರನ್ನು ಕರೆಸಿ ಬೀಗವನ್ನು ಹೊಡೆದು ಬಾಗಿಲು ತೆರೆದಾಗ ಸುಮಾರು ೪ ಕ್ಕೂ ಹೆಚ್ಚು ಗೋವುಗಳನ್ನು ಕಡಿದು ಗೊಮಾಂಸ ಮಾರಾಟಮಾಡಲು ಇಟ್ಟಿದ್ದಂತ ಗೊಮಾಂಸವನ್ನು ವಶಪಡಿಸಿಕೊಂಡು ಯಾರು ಮಾರಾಟಮಾಡಲು ಯತ್ನಿಸಿದವರ ಮೇಲೆ ಕಠಿಣವಾಗಿ ಪ್ರಕರಣ ದಾಖಲಿಸುವಂತೆ ಎಚ್ಚರಿಕೆ ನೀಡಿದರು.



