ಸಕಲೇಶಪುರ :-ತಾಲ್ಲೂಕಿನ ವೀರಯೋಧ ಎ.ಕೆ ಸಾಗರ್ ಪ್ರತಿಮೆ ಬಳಿ ಸಕಲೇಶಪುರ ತಾಲ್ಲೂಕು ರಕ್ಷಣಾ ಪಡೆಗಳ ಮಾಜಿ ಯೋಧರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು. ಶಾಸಕರಾದ ಸಿಮೆಂಟ್ ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು.

ನಾವು ದೇಶದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಸೈನಿಕರ ಸೇವೆ ಅತಿ ಮುಖ್ಯವಾದದ್ದು. ದೇಶದ ಪ್ರತಿಯೊಬ್ಬ ಪ್ರಜೆಯು ಸೈನಿಕರಿಗೆ ಗೌರವ ಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಕಲೇಶಪುರ ತಾಲ್ಲೂಕು ರಕ್ಷಣಾ ಪಡೆಗಳ ಮಾಜಿ ಯೋಧರ ಸಂಘದ ಅಧ್ಯಕ್ಷರಾದ ವಳಲಹಳ್ಳಿ ನಂದೀಶ್ ,ಉಪಾಧ್ಯಕ್ಷರಾದ ಹೆಚ್. ಕೆ ಕುಶಾಲಪ್ಪ, ಕಾರ್ಯದರ್ಶಿ ಕರಡಿಗಾಲ ಕೆ. ಜಿ ಧರ್ಮರಾಜ್, ನಿರ್ದೇಶಕರಾದ ಅರುಣ್, ಉದಯ್ , ನೀಲಕಂಠ , ವಿನೋದ್ ಕುಮಾರ್ ಹೆನ್ಲಿ, ಪಾಪಣ್ಣ ಲಕ್ಷ್ಮೀಪುರ, ಧರ್ಮರಾಜ್ ಹೆತ್ತೂರು, ಮಧು ಸುಳ್ಳಕ್ಕಿ, ಬೆಳ್ಳಿಗೌಡ, ಬಸವರಾಜ್ ಹಾಗೂ ಎ.ಕೆ ಸಾಗರ್ ಸಂಘದ ಅಧ್ಯಕ್ಷರಾದ ವೆಂಕಟೇಶ್ ಹಾಗೂ ಸಾಗರ್ ಅಣ್ಣ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *