ಸಕಲೇಶಪುರ :-ಜನರಿಂದ ಜನರಿಗಾಗಿ ಜನರಿಗೋಸ್ಕರ ಎನ್ನುವ ತಳಹದಿಯ ಮೇಲೆ ನಮ್ಮ ಸಂವಿಧಾನ ಸ್ಥಾಪಿತವಾಗಿದೆ.

ರಾಜ್ಯದಲ್ಲಾಗಲಿ ರಾಷ್ಟ್ರದಲ್ಲಾಗಲಿ ಯಾವುದೇ ಸರಕಾರಗಳು ಬರಲಿ ಅವುಗಳ ಮುಖ್ಯ ಉದ್ದೇಶ ಜನರಿಗೆ ಅನುಕೂಲ ಮಾಡಿಕೊಡುವುದಾಗಬೇಕಿದೆಯೇ ವಿನಹ ಜನರಿಗೆ ಕಿರಿಕಿರಿಯನ್ನು ಉಂಟುಮಾಡುವುದು ಅವುಗಳ ಕೆಲಸವಲ್ಲ.

ಬಹುಶಹ ಕರ್ನಾಟಕ ರಾಜ್ಯ ಸರ್ಕಾರದ ಕೆಲವೊಂದಿಷ್ಟು ನಡೆಗಳು ಬಡಬಗ್ಗರಿಗೆ ಜನಸಾಮಾನ್ಯರಿಗೆ ಕಿರಿಕಿರಿಯನ್ನುಂಟು ಮಾಡುವ ಹಾಗೂ ಬಡವರ ಮೇಲೆ ಕರುಣೆಯೇ ಇಲ್ಲದೆ ದೌರ್ಜನ್ಯದ ನಡೆಗಳು ನಡೆಯುತ್ತಿವೆಯೋ ಏನೋ ಎಂದು ಅನ್ನಿಸುತ್ತಿದೆ ಎಂದು ತೆಂಕಲಗೂಡು ಬೃಹನ್ಮಠದ ಶ್ರೀ ಷ. ಬ್ರ. ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

ಇತ್ತೀಚಿಗೆ ನಡೆದಂತಹ ಬೆಳವಣಿಗೆಯಲ್ಲಿ ಅರಣ್ಯ ಸಂರಕ್ಷಣೆಯ ಕಾಯಿದೆ ಅಡಿಯಲ್ಲಿ, ಒಂದು ಎರಡು ಎಕರೆ ಜಮೀನನ್ನ ಮಾಡಿಕೊಂಡು ಜೀವನೋಪಾಯವನ್ನು ಮಾಡುವ ರೈತರ ಜಮೀನುಗಳನ್ನ ಮುಟ್ಟುಗೋಲು ಹಾಕುವ ನಿಟ್ಟಿನಲ್ಲಿ ಏನು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಖಂಡಿತವಾಗಿಯೂ ಇದು ಖಂಡನಾರ್ಹ

ಹಲವಾರು ಕಡೆ ಗಣಿಗಾರಿಕೆಗೆ ಮೀಸಲಾದ ಜಮೀನನ್ನ ಕೇಳಲಿಕ್ಕೂ ಸಮಯವಿಲ್ಲದೆ ಇರುವಂತಹ ಪ್ರಸಂಗ ಎದುರಾದರೂ ಕೂಡ ಬಡಬಗ್ಗರ ಮೇಲೆ ಅನ್ನ ನೀಡುವ ರೈತನ ಮೇಲೆ ಸರಕಾರಕ್ಕೆ ಏಕೆ ಇಷ್ಟು ನಿಷ್ಕಾಳಜಿ ಮತ್ತು ಅವರ ಮೇಲೆ ಏಕೆ ಕರುಣೆ ಇಲ್ಲದೆ ನಡೆಯುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಮತ್ತು ಇದು ದುಃಖ ತರಿಸುವ ವಿಚಾರವಾಗಿದೆ.

ಸರ್ಕಾರ ಎಚ್ಚೆತ್ತುಕೊಂಡು ಜನರಿಂದ ಜನರಿಗಾಗಿ ಜನರಿಗೋಸ್ಕರ ರೂಪಿತಗೊಂಡ ಸಂವಿಧಾನದ ಆಶಯಕ್ಕೆ ಸಮರ್ಥನೆಯ ರೀತಿಯಲ್ಲಿ ನಡೆದುಕೊಂಡರೆ ಖಂಡಿತವಾಗಿಯೂ ಜನಸಾಮಾನ್ಯರು ನೆಮ್ಮದಿಯಿಂದ ಜೀವನವನ್ನು ನಡೆಸಬಹುದು. ಯಾವುದೇ ಸಂದರ್ಭಗಳಲ್ಲಿ ಜನರು ತಮ್ಮ ತಮ್ಮ ಜಮೀನನ್ನ ಒತ್ತುವರಿ ಮಾಡಿದ್ದಲ್ಲಿ ಅವರಿಗೆ ಅವಕಾಶವನ್ನು ಇತ್ತು ತೆರವುಗೊಳಿಸಲು ಒಂದಿಷ್ಟು ಸಮಯವನ್ನು ನೀಡಬೇಕು ಎನ್ನುವ ಸಾಮಾನ್ಯ ಪರಿಜ್ಞಾನವಿಲ್ಲದೆ ಕರುಣೆ ಇಲ್ಲದೆ ಅವರ ಗಿಡಗಳನ್ನು ಕತ್ತರಿಸಿ ಹಾಕಿರುವುದು ನಿಜವಾಗಿಯೂ ದುಃಖ ತರಿಸುವ ವಿಚಾರವಾಗಿದೆ.

ಹಾಗಾಗಿ ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *