
ಸಕಲೇಶಪುರ : ಬೆಳಗ್ಗೆ 9 ಗಂಟೆ ಸುಮಾರಿಗೆ ತಾಲ್ಲೂಕಿನ ಗ್ರಾಮಾಂತರ ಠಾಣೆ ವ್ಯಾಪ್ತಿಯ ಸುಳ್ಳಕ್ಕಿ ಗ್ರಾಮದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಜರಂಗದಳ ಕಾರ್ಯಕರ್ತರಿಗೆ ಸಿಕ್ಕಿದೆ.
ಕಾರ್ಯಪ್ರವೃತ್ತರಾದ ಬಜರಂಗದಳ ಕಾರ್ಯಕರ್ತರು ಗ್ರಾಮಾಂತರ ಪೋಲಿಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಹೋಗಿದ್ದು. ಪೋಲಿಸರು ಹಾಗೂ ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಹೋಗುವ ಮುನ್ನವೇ ಸುಳ್ಳಕ್ಕಿಯಿಂದ ಬ್ಯಾಕರವಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ KA-46-6713 Tata AceZIP ವಾಹನದಲ್ಲಿ ಅಕ್ರಮವಾಗಿ ಅಮಾನುಷವಾಗಿ 2 ಹೋರಿಗಳು 1 ಹೆಣ್ಣು ಹಸುವನ್ನು ಕ್ಲಿಷ್ಟಕರ ರೀತಿಯಲ್ಲಿ ತುಂಬಾಲವಾಗಿತ್ತು.
ಸ್ಥಳಕ್ಕೆ ಆಗಮಿಸಿದ್ದ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿಪ್ಪಾರಡ್ಡಿ ಅವರು ವಾಹನದಲ್ಲಿದ್ದ 2 ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಗೋವುಗಳನ್ನು ಅರಸೀಕೆರೆ ಗೋಶಾಲೆಗೆ ಬಿಡಲಾಗುವುದು ಎಂದು ಪೋಲಿಸ್ ಮೂಲಗಳು ಮಾಹಿತಿಯಿಂದ ತಿಳಿದುಬಂದಿದೆ


