
ಬೇಲೂರು : ವಿದ್ಯುತ್ ಕರೆಂಟ್ ಶಾಕ್ ನಿಂದಾಗಿ ೧ ಲಕ್ಷ ಮೌಲ್ಯದ ೨ ಎಮ್ಮೆಗಳು ಅಸುನೀಗಿರುವ ಘಟನೆ ತಾಲೂಕಿನ ನಾಗೇನಹಳ್ಳಿ ವ್ಯಾಪ್ತೀಯ ದಬ್ಬೆಗಡಿ ಭಾಗದ ಭೂತನಗುಡಿ ಹತ್ತಿರ ನಡೆದಿದೆ.
ಶುಕ್ರವಾರ ಸುರಿದ ಬಾರೀ ಮಳೆಗೆ ಗ್ರಾಮದ ಪ್ರಸನ್ನ ಎಂಬುವವರಿಗೆ ಸೇರಿದ ಸುಮಾರು ೧ ಲಕ್ಷ ಮೌಲ್ಯದ ಎಮ್ಮೆಗಳು ಮನೆಗೆ ಬರುವ ಸಂದರ್ಭದಲ್ಲಿ ಗಡಿಭಾಗದಲ್ಲಿ ಇರುವ ಭೂತನ ಗುಡಿ ಪಕ್ಕದ ವಿದ್ಯುತ್ ಪರಿವರ್ತಕದಿಂದ ವಿದ್ಯುತ್ ಪ್ರಸರಿಸಿ ಎರಡು ಎಮ್ಮೆಗಳು ಸ್ಥಳದಲ್ಲೇ ಸಾವನ್ಬಪ್ಪಿದ್ದು ಇದರಿಂದ ರೈತ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ ಕೂಡಲೇ ಅವರಿಗೆ ಚೆಸ್ಕಾಂ ಇಲಾಖೆಯಿಂದ ಹಾಗೂ ಸರ್ಕಾರದ ವತಿಯಿಂದ ಪರಿಹಾರ ದೊರಕಿಸಿಕೊಡಬೇಕೆಂದು ಗ್ರಾಮದ ಯುವಕ ಸುಮನ್ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಪಂ ಅಧ್ಯಕ್ಷ ಹರೀಶ್ ನಮ್ಮ ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾದ ಕಾರಣ ವಿದ್ಯುತ್ ಕಂಬಗಳ ತಂತಿಗಳು ಗಾಳಿ ಮಳೆಗೆ ತುಂಡಾಗಿ ಬೀಳುತ್ತಿದ್ದು ಇದರಿಂದ ಸಾರ್ವಜನಿಕರ ಆಸ್ತಿ ಹಾಗೂ ಮೂಕ ಪ್ರಾಣಿಗಳು ಬಲಿಯಾಗುತ್ತಿದೆ.
ಕೂಡಲೆ ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಸುಟ್ಟು ಹೋಗಿರುವ ವಿದ್ಯುತ್ ಪರಿಕರಗಳನ್ನು ಕೂಡಲೇ ಸರಿಪಡಿಸಿ ಕೊಡಬೇಕು ಹಾಗೂ ನಮ್ಮ ಗ್ರಾಮದ ಪ್ರಸನ್ನ ಎಂಬುವವರಿಗೆ ಸೇರಿದ ೨ ಎಮ್ಮೆಗಳು ಸಾವನ್ನಪ್ಪಿದ್ದು ಅದಕ್ಕೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.




