ಸಕಲೇಶಪುರ ತಾಲ್ಲೂಕಿನ ರೆಸಾರ್ಟ್ ಅಸೋಸಿಯೇಶನ್ ವತಿಯಿಂದ ರೆಸಾರ್ಟ್ ಮಾಲೀಕರು ಹಾಗೂ ರೆಸಾರ್ಟ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರುಗಳಿಂದ ಇಂದು ಸುಮಾರು ಹದಿನೈದು ಕಿಲೋಮೀಟರ್ ವರೆಗೆ ಆನೆ ಮಹಲ್ ನಿಂದ ಕ್ಯಾಮನ ಹಳ್ಳಿವರೆಗೂ ರಾಜ್ಯ ಹೆದ್ದಾರಿಯ ಸ್ವಚ್ಛತಾ ಕಾರ್ಯಕ್ರಮ.ಸಕಲೇಶಪುರ ಮಲೆನಾಡು ಭಾಗವಾಗಿದ್ದು ಮಲ್ನಾಡನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿಡುತ್ತೇವೆ ಹಾಗೆ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಬಾಟಲ್ ಗಳು ಪ್ಲಾಸ್ಟಿಕ್ ವಸ್ತುಗಳು ಹಾಗೂ ಇನ್ನಿತರ ವಸ್ತುಗಳನ್ನು ರಸ್ತೆ ಬದಿಯಲ್ಲಿ ಬಿಸಾಡದೇ ಒಂದು ಚೀಲದಲ್ಲಿ ಹಾಕಿ ಅದನ್ನು ಕಸದ ಡಬ್ಬಿಗೆ ಹಾಕಿದರೆ ಪ್ರಕೃತಿಯನ್ನು ಉಳಿಸಿಕೊಳ್ಳಬಹುದು ಸಕಲೇಶಪುರವನ್ನು ಸ್ವಚ್ಛವಾಗಿ ಇಡಬಹುದು ಎಂದು ರೆಸಾರ್ಟ್ ಮಾಲೀಕರಾದ ಮಸ್ತಾರೆ ಲೋಕೇಶ್ ಮನವಿ ಮಾಡಿಕೊಂಡರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *