
ರಾಷ್ಟ್ರೀಯ ಹೆದ್ದಾರಿ 75ರ ಅವ್ಯವಸ್ಥೆ , ಬಾಗೆ ಸರ್ಕಲ್ ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಅಪಘಾತ , ವಾಹನ ಸವಾರರಿಗೆ ತುಂಬಾ ತೊಂದರೆ ಆಗುತ್ತಿದ್ದು ರಸ್ತೆ ಬದಿಯಲ್ಲಿ ಕೆಟ್ಟು ನಿಂತ ಲಾರಿಗಳು ಒಂದು ಕಡೆ ಕಿರಿದಾದ ರಸ್ತೆ , ಇದರಿಂದ ಪ್ರತಿ ದಿನವೂ ಅಪಘಾತಗಳು ಸಂಭವಿಸುತ್ತಿವೆ.
ಈ ಅವೈಜ್ಞಾನಿಕ ಡಿವೈಡರ್ ಗಳು ಮತ್ತು ಸರಿಯಾದ ನಾಮಫಲಕ ಇಲ್ಲದೆ ಇರುವುದು ಮತ್ತು ಹೆದ್ದಾರಿಯಲ್ಲಿ ಅತಿಯಾದ ಸ್ಪಿಡ್ ನಿಂದ ಬರುವಂತಹ ವಾಹನಗಳಿಗೆ ಯಾವುದೇ ವೇಗದ ಮಿತಿ ಬೊರ್ಡ್ ಇಲ್ಲದೇ ಇರುವುದು ಕೂಡ ಅಪಘಾತಕ್ಕೆ ಅತಿ ಮುಖ್ಯವಾಗಿದೆ .
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಕೊಟ್ಟು ಸಂಪೂರ್ಣವಾಗಿ ಸರಿಪಡಿಸಬೇಕು ಎಂದು ನಾಗೇಂದ್ರ ಹೊಸಕೊಪ್ಪಲು ಮನವಿ ಮಾಡಿದ್ದಾರೆ.




