ಬೇಲೂರು : ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಹಕೀಮ್ ಕಳ್ಳೆರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗೆಂಡೆಹಳ್ಳಿ ಸಂತೇಜಾಗ ಸರ್ವೇ ನಂಬರ್ ಆರರಲ್ಲಿ ಮೂರು ಎಕರೆ ಇದ್ದ ಸಂತೆ ಜಾಗ ಇಂದು ಕೇವಲ 24 ಕುಂಟೆ ಜಾಗ ಉಳಿದಿದ್ದು

ಇದರಿಂದ ವಾರಕ್ಕೊಮ್ಮೆ ನಡೆಯುವ ಸಂತೆ ನಡೆಸಲು ತುಂಬಾ ಕಷ್ಟವಾಗುತ್ತಿದೆ ಒತ್ತುವರಿ ಮಾಡಿರುವ ವ್ಯಕ್ತಿಗಳಿಗಳು ಪ್ರಾಭಾವಿಗಳಿಂದ ಅಧಿಕಾರಿಗಳಿಗೆ ಒತ್ತಡ ತಂದು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ, ಅಲ್ಲದೆ 2022 ರಲ್ಲಿ ಈ ವಿಚಾರವಾಗಿ ಕಳ್ಳೆರಿ ಗ್ರಾಮ ಪಂಚಾಯತಿಯಲ್ಲಿ ಜಾಗದ ವಿಚಾರವಾಗಿ ಎಲ್ಲಾ ಸದಸ್ಯರು ಒಮ್ಮತದಿಂದ ನಿರ್ಣಾಯವನ್ನು ಮಾಡಿದ್ದು ಆ ನಿರ್ಣಯವನ್ನು ತಾಲ್ಲೂಕು ದಂಡಧಿಕಾರಿಗಳಿಗೆ ಮನವಿ ಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ತಕ್ಷಣ ತಾಲ್ಲೂಕು ದಂದಾಧಿಕಾರಿಗಳು ಜಾಗವನ್ನು ನೋಡಿ ಮಾಡಿ ಜಾಗಕ್ಕೆ ಸಂಬಂದಿಸಿದ ದಾಖಲೆಗಳನ್ನು ಪರಿಶೀಲಿಸಿ ಒತ್ತುವರಿ ಮಾಡಿರುವ ಜಾಗವನ್ನು ಸಂತೆಗೆ ಬಿಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು, ಒತ್ತುವರಿ ಬಿಡಿಸದೆ ಇದ್ದಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಬೇಕಾಗಿತ್ತದೆ ಎಂದು ಎಚ್ಚರಿಸಿದರು.

ರಾಷ್ಟ್ರೀಯ ಕಾಫಿ ಮಂಡಳಿ ಸದಸ್ಯ ಸ್ಥಳೀಯರಾದ ಜಿ ಕೆ ಕುಮಾರ್ ಮಾತನಾಡಿ ಮೂರು ಎಕರೆ ಇದ್ದ ಜಾಗವನ್ನು ಕೇವಲ 24 ಗುಂಟೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿರುವ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಈಗಿರುವ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಲು ಸಾಧ್ಯವಾಗದೆ, ಮಲೆನಾಡು ಪ್ರದೇಶವಾದ ಗೆಂಡೆಹಳ್ಳಿ ಪ್ರದೇಶವು ಯಾವಾಗಲು ಮಳೆ ಬರುತ್ತಿರುತ್ತದೆ, ಅಂತಹ ಸಮಯದಲ್ಲಿ ಸಾರ್ವಜನಿಕರು ಸಂತೆ ನಡೆಸುವ ವ್ಯಾಪಾರಿಗಳು ಕಷ್ಟ ಪಡುತ್ತಿದ್ದಾರೆ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೆ ಕಷ್ಟ ಪಡುತ್ತಿದ್ದಾರೆ

ದಂಡಾಧಿಕಾರಿಗಳು ದಕ್ಷರಿದ್ದು ಅನ್ಯಾವಾಗಿರುವ ಗೆಂಡೆಹಳ್ಳಿ ಜನತೆಗೆ ನ್ಯಾಯ ಕೊಡಿಸಬೇಕು ಕಳ್ಳೆರಿ ಕ್ಷೇತ್ರಕ್ಕೆ ಸುಮಾರು 54 ಹಳ್ಳಿಗಳು ನಾಲ್ಕು ಗ್ರಾಮಪಂಚಾಯತಿ ಸೇರುತ್ತದೆ, ಒತ್ತುವರಿಗೆ ಸಹಕರಿಸಿದ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು, ಗೆಂಡೆಹಳ್ಳಿ ಸುತ್ತಮುತ್ತಲಿನ ಜನತೆಗೆ ನ್ಯಾಯ ಕೊಡಿಸಬೇಕೆಂದು ಹೇಳಿದರು,ಮನವಿ ಪತ್ರವನ್ನು ಶಿರಸ್ತೇದಾರರಾದ ಶ್ವೇತಾ ಅವರಿಗೆ ಮನವಿ ಪತ್ರ ನೀಡಿದರು

ಪ್ರತಿಭಟನೆಯಲ್ಲಿ ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ದರ್ಶನ್,ದಬ್ಬೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಟೇಲ್ ನಾಗೇಶ್,ಬಿಜಿಪಿ ಹೋಬಳಿ ಅಧ್ಯಕ್ಷ ಮಹೇಶ್, ಜುಂಜಯ್ಯ, ನವೀನ್, ವಿಕಾಸ್ ಮಲ್ಲೇಶ್, ಸಚ್ಚಿನ್,ಇನ್ನೂ ಮುಂತಾದವರಿದ್ದರು,

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *