
ಸಕಲೇಶಪುರ : 170 ನೇ ನಾರಾಯಣ ಗುರು ಜಯಂತಿಯನ್ನು ತಾಲೂಕಿನ ಹಾನುಬಾಳುವಿನಲ್ಲಿ ಬಹಳ ಅದ್ದೂರಿಯಿಂದ ಆಚರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಲೋಹಿತ್ ಪೂಜಾರಿ, ಶಾಸಕರ ಪತ್ನಿ ಆದಂತಹ ಪ್ರತಿಮ, ಮಾಜಿ ಶಾಸಕರಾದ ವಿಶ್ವನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂತೋಷ್, ಸದಸ್ಯರಾದ ಮೋಹನ್ ಶಿಲ್ಪ, ಹಾಗೂ ಕೆಪಿಎಸ್ ಶಾಲೆಯ ಅಧ್ಯಕ್ಷರಾದ ಅರುಣ್ ಕುಮಾರ್, ಸಕಲೇಶಪುರ ಬಿಲ್ಲುವ ಸಂಘದ ಅಧ್ಯಕ್ಷರಾದ ಭಾಸ್ಕರ್, ಲಯನ್ಸ್ ನ ಅಧ್ಯಕ್ಷರಾದಂತಹ ಕೃಷ್ಣಪ್ಪ ಪೂಜಾರಿ, ಬಿಲ್ಲವ ಸಂಘದ ಸಲಹೆಗಾರರಾದ ಶ್ರೀನಿವಾಸ್ ಲೋಕೇಶ್ ಸ್ವಾಮಿ, ಸಂಘದ ಉಪಾಧ್ಯಕ್ಷರಾದ ಪುಟ್ಟರಾಜ್ ಗೌರವ ಅಧ್ಯಕ್ಷರಾದ ಜಯಶಾಲಿಯಾನ್ ಪ್ರಧಾನ ಕಾರ್ಯದರ್ಶಿಯಾದ ಕೃಷ್ಣ ಎಚ್ಎಸ್ ಹಾಗೂ ಪದಾಧಿಕಾರಿಗಳು ದಲಿತ ಸಂಘದ ಅಧ್ಯಕ್ಷರಾದ ಗೋಪಾಲ್ , ಹಾಗೂ ಹಾನುಬಾಳುವಿನ ಸಾರ್ವಜನಿಕರು ಅಂಗಡಿ ಮಾಲೀಕರು ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟರು.
ಸನ್ಮಾನಿತರಾದ ಜಯಶಾಲಿಯನ್ ರವರಿಗೆ ಸನ್ಮಾನವನ್ನು ಮಾಡಲಾಯಿತು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು..
ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕೆಲಸ ಮಾಡಿದಂತಹ ಎಲ್ಲರಿಗೂ ಅಧ್ಯಕ್ಷರು ಧನ್ಯವಾದಗಳು ತಿಳಿಸಿದರು..

