
ಯಾದ್ ಗಾರ್ ಇಬ್ರಾಹಿಂ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ. ಸಕಲೇಶಪುರದ ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀಯುತ. ಇಬ್ರಾಹಿಂ ಯಾದ್ಗಾರ್ ರವರಿಗೆ ಶನಿವಾರ ದಿನಾಂಕ 27/5/23 ರಂದು Global human peace university ಅವರು ನವದೆಹಲಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು ಯಾದ್ಗಾರ್ ಇಬ್ರಾಹಿಂ ಅವರು ಕಳೆದ 24 ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀ ಯುತರು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಪ್ರಸ್ತುತ ಈಗಲೂ ಕೂಡ ಆಕ್ಸ್‌ಫರ್ಡ್ ವಿದ್ಯಾಸಂಸ್ಥೆಯ ಮೂಲಕ ವಿದ್ಯಾದಾನ ಮಾಡಿಕೊಂಡು ಬರುತ್ತಿದ್ದಾರೆ ಇವರ ಮಹತ್ಕಾರ್ಯಕ್ಕೆ ಸಂದಿರುವ ಗೌರವ ಎಂದು ಹೇಳಬಹುದಾಗಿದೆ . ಡಾ. ಇಬ್ರಾಹಿಂ ಯಾದ್ಗಾರ್ ರವರು ಪುರಸಭೆಯ ಮಾಜಿ ಅಧ್ಯಕ್ಷರಾಗಿ ಸಮಾಜದಲ್ಲಿ ಸಾಮರಸ್ಯವನ್ನು ಉಂಟುಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದು ಹೇಳಲಾಗುತ್ತಿದೆ ಇವರಿಗೆ ಸಕಲೇಶಪುರದ ಜನತೆ, ಸಂಘ ಸಂಸ್ಥೆಗಳು ಹಾಗೂ ಗಣ್ಯರು ಅಭಿನಂದಿಸಿದ್ದಾರೆ.
