
ಸ್ವಚ್ಛ ನಿಸರ್ಗ , ಕೆ. ಹೊಸಹಳ್ಳಿ ಸ್ವರ್ಗ.”
ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಇಪ್ಪತ್ತೊಂದು ಆಗಷ್ಟ್ 2024 ರಂದು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳು ಸ್ವಚ್ಛತೆಯ ಪ್ರಾಮುಖ್ಯತೆಯ ಬಗ್ಗೆ ಹೊಸಹಳ್ಳಿ ಗ್ರಾಮಸ್ತರಿಗೆ ಅರಿವು ಮೂಡಿಸಲಾಯಿತು.
ಅದರಂತೆಯೇ ವಿದ್ಯಾರ್ಥಿಗಳು ಊರಿನಲ್ಲಿರುವ ದೇವಸ್ಥಾನ ಮುಂದುಗಡೆ,ಸಮುದಾಯ ಭವನದ ಆವರಣದ ಮುಂಬಾಗದಲ್ಲಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆ.ಹೊಸಹಳ್ಳಿ ಗ್ರಾಮದ ಮುಂಭಾಗದಲ್ಲಿ ಶಾಲೆಯ ಮಕ್ಕಳಿಂದ ಊರ ತುಂಬೆಲ್ಲಾ ಜಾಥಾ ಮಾಡುವ ಮೂಲಕ ಊರ ಜನರಲ್ಲಿ ಸ್ವಚ್ಛತೆ ಬಗೆಗಿನ ಧ್ಯೇಯವಾಕ್ಯಗಳ ಫಲಕಗಳನ್ನು ಹಿಡಿದುಕೊಂಡು ,ಊರಿನಲ್ಲಿ ಸ್ವಚ್ಛ ನಿಸರ್ಗ, ಕೆ.ಹೊಸಹಳ್ಳಿ ಸ್ವರ್ಗ.ಹಾಗೂ ನಮ್ಮ ಗ್ರಾಮ ,ಸ್ವಚ್ಛ ಗ್ರಾಮ .ಎಂಬ ಘೋಷ ವಾಕ್ಯಗಳನ್ನು ಮುಗಿಲಿಗೆ ಮುಟ್ಟೀವ ಹಾಗೆ ತಮ್ಮ ಕಂಠದಿಂದ ಕೂಗುತ್ತ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.


