ಸಕಲೇಶಪುರ :- ಶಾಸಕ ಮುನಿರತ್ನ ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿದ್ದುಕೊಂಡು ಮಹಿಳೆಯರ ಬಗ್ಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಒಕ್ಕಲಿಗರ ಬಗ್ಗೆ ಆವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವುದು ಸಮಾಜವೇ ತಲೆತಗ್ಗಿಸುವ ಹೀನ ಕೃತ್ಯವಾಗಿದೆ.

ಮುನಿರತ್ನ ಮಾತನಾಡಿರುವ ಅಸಂವಿಧಾನಿಕ ಪದಗಳು ಬಿಜೆಪಿಯವರ ಮನಸ್ಥಿತಿಯ ಪ್ರತಿಬಿಂಬವಾಗಿದೆ. ದಲಿತರ ಹಾಗೂ ಮಹಿಳೆಯರ ಬಗ್ಗೆ ಬಿಜೆಪಿ ಹೊಂದಿರುವ ನಿಲುವು ಇದಾಗಿದೆ. ಶಾಸಕ ಮುನಿರತ್ನ ಶಾಸಕ ಸದಸ್ಯತ್ವ ರದ್ದುಮಾಡಬೇಕು, ಗಡಿಪಾರು ಮಾಡಬೇಕು, ಇಂತಹ ನೀಚರಿಂದ ಇಡೀ ರಾಜಕೀಯ ವ್ಯವಸ್ಥೆಗೆ ಕಳಂಕ ವಾಗಿದೆ.

ಸಂವಿಧಾನಾತ್ಮಕ ಸ್ಥಾನ ಅಲಂಕರಿಸಿರುವ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಆತನಿಗೆ ಪ್ರಾಣ ಬೆದರಿಕೆ ಹಾಕಿರುವ ಮುನಿರತ್ನ ತನ್ನ ಸ್ನಾನದಲ್ಲಿ ಮುಂದುವರೆಯಲು ಅನರ್ಹ . ವಿವಿಧ ಸಮುದಾಯಗಳ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ.

ಇವರನ್ನು ಶಾಸಕ ಸ್ಥಾನದಿಂದ ವಜಗೊಳಿಸಿ ಕಾನೂನು ಕೈಗೊಳ್ಳುವಂತೆ ಕಾಂಗ್ರೆಸ್ ಎಸ್ ಸಿ, ಎಸ್ ಟಿ ಘಟಕ ವಿಭಾಗ ದಿಂದ ತಾಲ್ಲೂಕು ವಿಭಾಗಧಿಕಾರಿ ಕಛೇರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೈಕೆರೆ ದೇವರಾಜ್ ಮಾತನಾಡುತ್ತಾ ” ಮುನಿರತ್ನ ಹೇಳಿಕೆಯ ಬಗ್ಗೆ ಸ್ಥಳೀಯ ಶಾಸಕರು ಯಾವುದೇ ರೀತಿಯ ಹೇಳಿಕೆ ಕೊಡದಿರುವುದು ಎಷ್ಟು ಸರಿ. ರಾಜ್ಯ ಎಸ್ ಸಿ ಎಸ್ ಟಿ ಯುವ ಮೋರ್ಚಾ ಅಧ್ಯಕ್ಷರಾಗಿರುವ ಇವರು ಯಾವರೀತಿ ದಲಿತರ ಪರವಾಗಿ ಇದ್ದಾರೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು. ಹಾಗೂ ಮುನಿರತ್ನ ಅವರು ತಪ್ಪು ಮಾಡಿದ್ದಲ್ಲಿ ರಾಜ್ಯಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳುವುದು ಎಷ್ಟು ಸರಿ ಎಂದು ಈ ಸಂದರ್ಭದಲ್ಲಿ ಹೇಳಿದರು.

ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ವಿಜಿ ಕುಮಾರ್ ಮಾತನಾಡಿ ” ಶಾಸಕರಾದ ಮುನಿರತ್ನ ರವರು ಜಾತಿ ನಿಂದನೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ದೇಶ ಬಗ್ಗೆ ಮಾತನಾಡುವ ಇವರು ಜಾತಿಯ ವ್ಯವಸ್ಥೆಯ ಮೂಲಕ ಜನರನ್ನು ಎತ್ತು ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಇವರನ್ನು ಶಾಸನ ಸ್ಥಾನದಿಂದ ಕೂಡಲೆ ಕೆಳಗಿಳಿಸಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಬೇಕು.ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಅನ್ನಪೂರ್ಣ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಕೆ. ಪಿ ಕೃಷ್ಣೆಗೌಡ, ಕೆಡಿಪಿ ಸದಸ್ಯರಾದ ಕೋಮರೈಯ್ಯ ,ಗೊದ್ದು ಲೋಕೇಶ್, ಸಾಹಿರಾಬಾನು , ಮಹಮ್ಮದ್ ಅಚಾಂಗಿ, ಬೈಕೇರೆದೇವರಾಜ್, ಪ್ರಸಾಂತ್, ದೇವರಾಜ್, ಚಂದ್ರಶೇಖರ್, ಪರ್ವತಯ್ಯಾ, ಅಣ್ಣಪ್ಪ, ಯೂತ್ ಕಾಂಗ್ರೆಸ್ ನ ದೊಡ್ಡಮನೆ ದೇವರಾಜ್,ಹಸೀನಾ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *