ಸಕಲೇಶಪುರ ಮಲೆನಾಡು ರಕ್ಷಣಾ ಸೇನೆಯ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ .

ಮಲೆನಾಡು ರಕ್ಷಣಾ ಸೇನೆ ತೀರ ಗಂಭೀರವಾಗಿ ಸಕಲೇಶಪುರದ ಹೆಬ್ಬಾಗಿಲಾಗಿರುವ ಸಕಲೇಶಪುರದ ಬ್ರಿಡ್ನ ಬಳಿ ಅಕ್ರಮವಾಗಿ ಖಾಸಗಿ ವ್ಯಕ್ತಿ ಒಬ್ಬ ತನ್ನ ಉದ್ಯಮಕ್ಕಾಗಿ ಹಾಕಿಕೊಂಡಿದ್ದ ನಾಮಫಲಕವನ್ನು ತೆರವುಗೊಳಿಸುವಂತೆ ವಿಭಿನ್ನ ರೀತಿಯ ಹೋರಾಟವನ್ನು ಸಹ ಮಾಡಿತ್ತು ನಂತರ ಧರಣಿಯನ್ನು ಮಾಡುವುದಾಗಿಯೂ ಸಹ ಎಚ್ಚರಿಕೆಯನ್ನು ನೀಡಿತು

ಇದನ್ನೆಲ್ಲ ಮನಗೊಂಡು ಪುರಸಭೆಯ ಮುಖ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇಂದು ಅನಧಿಕೃತವಾಗಿ ನಡು ರಸ್ತೆಯಲ್ಲಿ ಖಾಸಗಿ ವ್ಯಕ್ತಿ ಹಾಕಿಕೊಂಡಿದ್ದ ನಾಮಫಲಕವನ್ನು ತೆರವುಗೊಳಿಸಿದೆ

ಇದು ಮಲೆನಾಡು ರಕ್ಷಣಾ ಸೇನೆಯ ಹೋರಾಟಕ್ಕೆ ಸಿಕ್ಕ ಜಯ ಎಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರು ಡಾ.ಸಾಗರ್ ಜಾನೆಕೆರೆ ಪತ್ರಿಕೆಗೆ ತಿಳಿಸಿದ್ದಾರೆ

ಬೋರ್ಡ್ ಅನ್ನು ತೆರವುಗೊಳಿಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಹಾಗೂ ಮಲೆನಾಡು ರಕ್ಷಣಾ ಸೇನೆಯ ಕಾರ್ಯಕರ್ತರಿಗೂ ತಾಲೂಕು ಅಧ್ಯಕ್ಷರಿಗೂ ಹಾಗೂ ಕನ್ನಡಪರ ಹೋರಾಟಗಾರರಿಗೂ ಈ ಮೂಲಕ ಧನ್ಯವಾದಗಳು ತಿಳಿಸಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *