ಬೇಲೂರು : ಮಾನ್ಯ ಶಾಸಕರೇ ಸಂಸದರೇ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಬಕ್ಕರವಳ್ಳಿ ಗ್ರಾಮಕ್ಕೆ ಒಂದು ಬಾರಿ ಆಗಮಿಸಿ ಆಗ ಮಾತ್ರ ತಮಗೆ ತಿಳಿಯಲು ಸಾಧ್ಯ ನಮ್ಮ ಗ್ರಾಮಕ್ಕೆ ಕಲ್ಪಿಸುವ ರಸ್ತೆಯು ಎಂತಹ ದುಸ್ಥಿತಿಯಲ್ಲಿದೆ.

ಒಮ್ಮೆಯಾದರೂ ನಮ್ಮ ಗ್ರಾಮದ ರಸ್ತೆಯ ದುಸ್ಥಿತಿಯನ್ನು ನೋಡಿ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಹೆಚ್ ಇಸ್ಮಾಯಿಲ್ ತಮ್ಮ ಅಳಲನ್ನು ತೋಡಿಕೊಂಡರು

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಗ್ರಾಮದ ಮುಖ್ಯವಾಗಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ವಿದ್ಯಾಭ್ಯಾಸಕ್ಕಾಗಿ ಹಾಗು ಗ್ರಾಮಸ್ಥರ ತುರ್ತು ಅನಾರೋಗ್ಯ ಸಂಬಂಧ ಆಸ್ಪತ್ರೆಗಾಗಿ ಪಟ್ಟಣಕ್ಕೆ ತೆರಳಲು ಇರುವುದೊಂದೇ ರಸ್ತೆ ಅದುವೇ ಇದೀಗ ಉದ್ದಗಲಕ್ಕೂ ಗುಂಡಿ ಬಿದ್ದು ಸಂಚಾರಕ್ಕೆ ಸಂಚಕಾರ ತರುವಂತಿದೆ.

ಕಳೆದ ಬಾರಿ ಸುರಿದ ವಿಪರೀತ ಮಳೆಗೆ ರಸ್ತೆಯ ಉದ್ದಕ್ಕೂ ಗುಂಡಿ ಬಿದ್ದುದ್ದು ತೀವ್ರ ಹದಗೆಟ್ಟ ರಸ್ತೆಯಲ್ಲಿ ಆಗಬಹುದಾದ ಹೆಚ್ಚಿನ ಅಪಾಯಗಳನ್ನು ತಡೆಗಟ್ಟುವ ಸದುದ್ದೇಶದಿಂದ ಸ್ವತಃ ಗ್ರಾಮಸ್ಥರೆ ಚಂದಾ ಹಣ ಹೊಂದಿಸಿ ತಾತ್ಕಾಲಿಕವಾಗಿ ಗುಂಡಿಗಳಿಗೆ ಮಣ್ಣು ತುಂಬಿಸಿ ಜೆಸಿಬಿಯಿಂದ ಸಮತಟ್ಟು ಮಾಡುವ ದುಸ್ಥಿತಿ ನಮ್ಮದಾಗಿದೆ

ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಸಹಾ ಇಲ್ಲದೆ ಖಾಸಗಿ ವಾಹನಗಳಿಗೆ ದುಬಾರಿ ವೆಚ್ಚ ಬರಿಸಿ ಪಟ್ಟಣಕ್ಕೆ ತೆರಳುವ ಕೂಲಿ ಕಾರ್ಮಿಕರ, ಕೃಷಿ ಕಾರ್ಮಿಕರ ಹಾಗು ಸಾರ್ವಜನಿಕರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *