ಸಕಲೇಶಪುರ : ಬಾಳೆಗದ್ದೆ ಜನತಾ ಕ್ವಾಟರ್ಸ್ನ ನಿವಾಸಿ ಬಾಬು ರವರ ಪುತ್ರ ಆನಂದ್ ಎಂಬುವರು ನಿಧನರಾಗಿದ್ದಾರೆ

ಇವರು ವೃತ್ತಿಯಲ್ಲಿ ಗ್ಯಾರೇಜ್ ನಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಇವರು ಆದಿ ದ್ರಾವಿಡ ಸಂಘದ ಜಿಲ್ಲಾಧ್ಯಕ್ಷರಾದ ಶಂಕರ್ ಅವರ ಸಹೋದರನಾಗಿರುತ್ತಾರೆ

ಇವರು ಹೆಂಡತಿ ಇಬ್ಬರು ಮಕ್ಕಳು, ಮಗ ತೀರ್ಥ 12ವರ್ಷ, ಮಗಳು ಅನ್ವಿತ 6ವರ್ಷ ಇವರನ್ನು ಅಗಲಿದ್ದಾರೆ. ಇವರು ಹಲವು ದಿನಗಳಿಂದ ಗ್ಯಾಂಗ್ರೀನ್ ನಿಂದ ಬಳಲುತ್ತಿದ್ದರು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ದಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಟುಂದವರನ್ನು ಅಗಲಿದ್ದಾರೆ.

ಇಂದು ಸಕಲೇಶಪುರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *