
ಭಾರತದ ಉದ್ಯೋಗ ವಲಯದ ಪಿತಾಮಹ. ಅಜಾತ ಶತ್ರು. ದೇಶ ಕಂಡ ಮಹಾನ್ ಮಾನವತಾವಾದಿ. ಬಡವರ ಬಂಧು, ಕೊಡುಗೈ ದಾನಿ. ಭಾರತದ ಶ್ರೀಮಂತ ಉದ್ಯಮಿ. ಸರಳ ಜೀವಿ. ಎಲ್ಲರ ನೆಚ್ಚಿನ ರತನ್ ಟಾಟಾ ತಮ್ಮ ಜೀವನ ಬಂಡಿಯನ್ನು ನಿಲ್ಲಿಸಿದ್ದಾರೆ.
ಭಾರತ ಕಂಡ ಶ್ರೇಷ್ಠ ಕೈಗಾರಿಕೋದ್ಯಮಿ, ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದವರು ತಮ್ಮ 86ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ಭಾರತದ ವಸ್ತುಗಳಂದ್ರೆ ಮೂಗು ಮುರಿಯುವಾಗ ವಿಶ್ವಾದ್ಯಂತ ಟಾಟಾ ಕಂಪನಿಗಳಿಗೆ ಉತ್ತಮ ಹೆಸರನ್ನು ತಂದು ಕೊಟ್ಟವರು. ವೃದ್ಧಾಪ್ಯದಲ್ಲೂ ಸದಾ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದ ರತನ್ ಟಾಟಾ ಇಂದು ನಮ್ಮನೆಲ್ಲ ಅಗಲಿ ಕಾಲದ ಕರೆಗೆ ಓಗೊಟ್ಟಿದ್ದಾರೆ

