
ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಹಾಗೂ ಬಿಟೆಕ್ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ಕಾಂಪೋಸ್ಟ್ ಟೀ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ರೇಖಾ ಬಿ ಸಹಾಯಕ ಪ್ರಾಧ್ಯಾಪಕಿ ತೋಟಗಾರಿಕಾ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಇವರು ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಜೈವಿಕ ತಂತ್ರಜ್ಞಾನದ ವಿಧ್ಯಾರ್ಥಿಗಳು ಕಾಂಪೋಸ್ಟ್ ಟೀ ತಯಾರಿಸುವ ವಿಧಾನವನ್ನು ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ನೆರೆದಿರುವ ಎಲ್ಲಾ ಜನರಿಗೆ ಹೇಳಿಕೊಟ್ಟರು ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯಲ್ಲಿ ಊರಿನ ರೈತರನ್ನು ಭಾಗಿಮಾಡಿಕೊಂಡಿದ್ದರು. ಹಾಗೂ ಕಾಫಿ, ಟೀ ಮಾನವನಿಗೆ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಕಾಂಪೋಸ್ಟ್ ಟೀ ಬೆಳೆಗಳಿಗೆ ,ಸಸಿಗಳಿಗೆ ಮುಖ್ಯವಾಗಿವೆ ಎಂಬುದನ್ನು ತಿಳಿಸಿದರು.ಹಾಗೂ ಕಾಂಪೋಸ್ಟ್ ಟೀ ಇಂದ ಆಗುವ ಅನುಕೂಲಗಳೇನು ಎಂಬುದನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರು,ಪ್ರಗತಿ ಪರ ರೈತರು,ರೈತಮಹಿಳೆಯರು,ಹಾಗೂ ಕೆ ಹೊಸಹಳ್ಳಿಯ ಎಲ್ಲಾ ಜನಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
