
ಹಾಸನ : ಕೃಷಿ ಕ್ಷೇತ್ರದಲ್ಲಿ, ಬೆಳೆಗಳ ಗುಣಮಟ್ಟ ಮತ್ತು ಉತ್ಪಾದನೆಯು ಕೃಷಿಕರ ಜೀವನವನ್ನು ನಿರ್ಧಾರ ಮಾಡುತ್ತದೆ. ಈ ಹಿನ್ನೆಲೆಯಲ್ಲಿ, ಹೋಸ ತಳಿ (ಸ್ಥಳೀಯ ತಳಿ) ಮತ್ತು ಹೈಬ್ರಿಡ್ (ಕ್ರಾಸ್‌ಬ್ರೀಡ್) ಬೆಳೆಗಳು ವಿಶೇಷ ಮಹತ್ವವನ್ನು ಹೊಂದಿವೆ ಎಂದು ಸಾಕ್ಷಿ ರವರು ತಿಳಿಸಿದರು.
ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ(ಅನಾರ್ಸ) ಕೃಷಿ ಮತ್ತು ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ೨೦೨೪-೨೫ ರ ಅಂಗವಾಗಿ ಹೊಸ ತಳಿಗಳು ಮತ್ತು ಹೈಬ್ರಿಡ್ ಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
CNFSI ( ಜೋಳದ ಹೈಬ್ರಿಡ್), ML-322, KMR 301, Indaf 8 (ರಾಗಿ ತಳಿಗಳು), ಕುರ್ಫಿ ಚಂದ್ರಮುಖಿ, ಕುರ್ಫಿ ಜ್ಯೋತಿ (ಆಲೂಗೆಡ್ಡೆ ತಳಿಗಳು), ವರದ ( ಶುಂಠಿ ತಳಿ) ಹೀಗೆ ಮುಂತಾದ ಈ ತಳಿಗಳು ಸ್ಥಳೀಯ ಹವಾಮಾನ ಮತ್ತು ಮಣ್ಣಿನ ಗುಣಕ್ಕೆ ಹೊಂದಿಕೊಂಡಿದ್ದು, ಸ್ಥಳೀಯ ಪರಿಸರದಲ್ಲಿ ಬೆಳೆದ ಕಾರಣ, ಅವು ಕೆಲವೊಂದು ರೋಗಗಳಿಗೆ ಹೆಚ್ಚು ಪ್ರತಿರೋಧಕಶಕ್ತಿಯನ್ನು ಹೊಂದಿದೆ ಎಂದು ಶ್ರಾವ್ಯ ರವರು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಜೋಡಿಕೃಷ್ಣಾಪುರದ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.ಈ ಅರಿವು ರೈತರಲ್ಲಿನ ಜಾಗೃತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ, ಮತ್ತು ಉತ್ತಮ ಕೃಷಿ ಅಭ್ಯಾಸಗಳನ್ನು ಅನುಸರಿಸಲು ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ.
