ಹಾಸನ : ನ್ಯಾನೋ ಗೊಬ್ಬರಗಳು ಸಂಪ್ರದಾಯಕ ರಸಗೊಬ್ಬರಗಳಿಂದ ಮಾರ್ಪಡಿಸಲ್ಪಟ್ಟಿದೆ ಅಥವಾ ಸಂಶ್ಲೇಷಿಸಲ್ಪಟ್ಟ ರಸಗೊಬ್ಬರಗಳಾಗಿವೆ ಅಥವಾ ನ್ಯಾನೋತಂತ್ರಜ್ಞಾನವನ್ನು ಬಳಸಿಕೊಂಡು ಸಸ್ಯದ ಭಾಗಗಳಿಂದ ಹೊರತೆ ಗೆಯಲಾಗುತ್ತದೆ.

ರಸಗೊಬ್ಬರಗಳಿಂದ ಕೇವಲ 40-50% ಮಾತ್ರಾ ಸಾರಜನಕವನ್ನು ಸಸ್ಯಗಳು ಬಳಕೆ ಮಾಡುತಿದ್ದು ಇವುಗಳು ಅಂತರ್ಜಲ ಮಾಲಿನ್ಯ, ಭೂ ಮಾಲಿನ್ಯ,ಹಸಿರು ಮನೆ ಅನಿಲಗಳ ನ್ನು ಬಿಡುಗಡೆ ಮಾಡುತ್ತವೆ. ಇವು ಗಳಿಗೆ ಹೋಲಿಸಿದರೆ ನ್ಯಾನೋ ಗೊಬ್ಬರಗಳಲ್ಲಿರುವ ಸಾರಜನಕವು 80-90% ಬಳಕೆಯಗುತ್ತದೆ.

ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ(ಆನರ್ಸ್) ಮತ್ತು ಜೈವಿಕತಂತ್ರಜ್ಞಾನದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ 2024-25ರ ಅಂಗವಾಗಿ ನ್ಯಾನೋ ಗೊಬ್ಬರಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ನ್ಯಾನೋ ಗೊಬ್ಬರಗಳ ಅನ್ವಯಕ್ಕೆ ಸೂಕ್ತವಾದ ಬೆಳೆಗಳ ಬಗ್ಗೆ ತಿಳಿಸಿಕೊಟ್ಟರು.ನ್ಯಾನೋ ಗೊಬ್ಬರಗಳ ಪ್ರಯೋಜನಗಳು ಮತ್ತು ಹೇಗೆ ಅವುಗಳು ಕೃಷಿಯನ್ನು ಸುಲಭ ಮತ್ತು ಸುಸ್ಥಿರ ಗೊಳಿಸುವುದೆಂದು ತಿಳಿದರು.

ಅವರು ಭಾರತದಲ್ಲಿ ಬಳಸುತ್ತಿರುವ ನ್ಯಾನೋ ಗೊಬ್ಬರಗಳಾದ ನ್ಯಾನೋ ಡಿಎಪಿ ಮತ್ತು ನ್ಯಾನೋ ಯೂರಿಯಾ ಹೇಗೆ ಸಾಮಾನ್ಯ ರಸಗೊಬ್ಬರಗಳಿಗೆ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ ವಾಗುತ್ತದೆ ಎಂದು ತಿಳಿಸಿಕೊಟ್ಟರು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಭರತ್ ಪ್ರಸಾದ್ ಸಿ ಟಿ (ಜೈವಿಕ ತಂತ್ರಜ್ಞಾನ ವಿಭಾಗ) ರವರು ಆಗಮಿಸಿದ್ದರು. ಅವರು ನ್ಯಾನೊಗೊಬ್ಬರಗಳನ್ನು ಹೇಗೆ ಬಳಸಬೇಕು, ಅವುಗಳನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು, ಅದರಿಂದ ಆಗುವ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳನ್ನು ತಿಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *