
ಸಕಲೇಶಪುರ : ಈ ದಿನ ಪಟ್ಟಣದ ಮಲ್ಲಿಕಾರ್ಜುನ ಬಡಾವಣೆಯ ಸವಿತಾ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಕಲೇಶಪುರ ಬ್ಯೂಟಿ ಪಾರ್ಲ್‌ರ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಬ್ಯೂಟಿ ಪಾರ್ಲರ್ ಎಂದರೆ ಸಾಮಾನ್ಯವಾಗಿ ಹಿಂದೆ ನೋಡುವ ದೃಷ್ಠಿ ಬೇರೆಯೇ ಇತ್ತು ಇಂದು ಒಬ್ಬ ಮಹಿಳೆ ಸ್ವತಂತ್ರವಾಗಿ ಸ್ವ ಶಕ್ತಿಯಿಂದ ಇಂದು ಸಮಾಜದಲ್ಲಿ ಸಾಮಾಜಿಕವಾಗಿಆರ್ಥಿಕವಾಗಿ ಸದೃಢವಾದ ಜೀವನವನ್ನು ನಡೆಸುವ ಮೂಲಕ ತನ್ನ ಕುಟುಂಭವನ್ನು ನಿರ್ವಹಣೆ ಮಾಡುವ ಶಕ್ತಿಯನ್ನು ಹೊಂದಿದ್ದಾಳೆ
ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು ನಾವು ಮಾಡುವ ಕೆಲಸ ಯಾವುದೂ ಕೀಳಲ್ಲ ನೀವೆಲ್ಲರೂ ಒಗ್ಗಟ್ಟಾಗಿದ್ದರೆ ಜಯ ಸಾದಿಸಲು ಸಾದ್ಯ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅದ್ಯಕ್ಷ ಜೈಭೀಮ್ ಮಂಜು ಮಾತನಾಡಿ ವ್ಯಾಪಾರ ಹಾಗೂ ಉದ್ಯೋಗದಲ್ಲಿ ಇಂದು ಪರಸ್ಪರ ಸ್ಪರ್ಧೆಗಳು ನಡೆಯುತ್ತಿದ್ದು ಆಧುನಿಕತೆಗೆ ನಾವೆಲ್ಲರೂ ಹೊಂದಿಕೊಳ್ಳ ಬೇಕಾಗಿದ್ದು ಒಗ್ಗಟ್ಟಿದ್ದರೆ ಬಲವಿದೆ ಎನ್ನುವ ಹಾಗೆ ಒಗ್ಗಟ್ಟಿದ್ದರೆ ನಿಮ್ಮ ಸಂಘವು ಮತ್ತಷ್ಟು ಎತ್ತರಕ್ಕೆ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಹಾಗೂ ರೋಟರಿ ಟ್ರಸ್ಟ್ ನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದರು.
ಪ್ರಾಸ್ಥಾವಿಕವಾಗಿ ಸಕಲೇಶಪುರ ಬ್ಯೂಟಿ ಪರ್ಲರ್‌ನ ಸದಸ್ಯರಾದ ವಜ್ರ ಲೋಕೇಶ್ ಮಾತನಾಡಿ ಸಂಘದ ಉದ್ದೇಶಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಕಲೇಶಪುರ ಬ್ಯೂಟಿ ಪಾರ್ಲರ್ ಅಸೋಸಿಯೇಷನ್‌ನ ಅದ್ಯಕ್ಷರಾದ ಸವಿತಾ, ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷರಾದ ಜೈಭೀಮ್ ಮಂಜು, ಪತ್ರಕರ್ತರು ಹಾಗೂ ರೋಟರಿ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್,ಮಲ್ನಾಡ್ ಶಾಡೋ ವೆಬ್ ಚಾನಲ್ ವರದಿಗಾರರಾದ ರಾಣಿ, ಪಾರ್ಲರ್ ಸಂಘದ ನಿಶ್ಮಿತಾ ರವಿಕುಮಾರ್, ಶಕುಂತಲಾ, ಸುಮಾ ಆಳ್ವ ಇತರರು ಇದ್ದರು.



