ಸಕಲೇಶಪುರ : ಪಟಾಕಿ ಮಾರಾಟ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಧಾರ್ಮಿಕ ಕಾರ್ಯನಿಮಿತ್ತ ದೀಪಾವಳಿ ಹಬ್ಬದ ದಿನದಂದು ಪಟಾಕಿ ಹೊಡೆಯುವ ಮೂಲಕ ಹಬ್ಬವನ್ನು ಆಚರಣೆ ಮಾಡುವ ಪದ್ಧತಿಯಿದ್ದು ಸರ್ಕಾರವು ಸಾರ್ವಜನಿಕರಿಗೆ ಪಟಾಕಿಯನ್ನು ಖರೀದಿಸಲು ಸ್ಥಳ ನಿಗದಿಪಡಿಸುವ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತಹ ಸ್ಥಳವನ್ನು ಗುರುತಿಸಬೇಕಾಗಿರುತ್ತದೆ

ಸರಕಾರದ ನಿಯಮದ ಪ್ರಕಾರ ಸಿಡಿಮದ್ದುಗಳ ಮಾರಾಟ ಮಾಡಲು ಯಾವುದೇ ಜನ ನಿಬೀಡ ಪ್ರದೇಶದಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪಟಾಕಿ ಮಾರಾಟಮಾಡುವ ನಿಯಮ ಇಲ್ಲದಿದ್ದರೂ ಸಹ ಸಕಲೇಶಪುರದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆಯ ಪಕ್ಕದಲ್ಲಿ ಪಟಾಕಿಯನ್ನು ಮಾರಾಟ ಮಾಡಲು ಸ್ಥಳವನ್ನು ನಿಗದಿಪಡಿಸಿರುವುದು ಜನಾ ಕ್ರೋಶಕ್ಕೆ ಕಾರಣವಾಗಿರುತ್ತದೆ

ಸಕಲೇಶಪುರದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿರುವ ಸ್ಥಳವು ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಹೊಂದಿಕೊಂಡು ಸಾರ್ವಜನಿಕರು ತಿರುಗಾಡುವ ಪ್ರದೇಶಕ್ಕೆ ಹೊಂದಿಕೊಂಡು ಪಾದ ಚಾರಿ ದಾರಿಯಾಗಿರುತ್ತದೆ ಹಾಗೂ ಪಟಾಕಿ ಮಾರಾಟಕ್ಕೆ ಕೊಟ್ಟಿರುವ ಸ್ಥಳವು 100 ಮೀಟರ್ ಒಳಗೆ ವಾಸವಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಾಸವಿ ಪ್ರೌಢಶಾಲೆ ಇರುತ್ತದೆ ಇದರಿಂದ ಸಾರ್ವಜನಿಕವಾಗಿ ತೊಂದರೆ ಉಂಟಾಗುತ್ತದೆ

ಒಂದು ವೇಳೆ ಈ ಪಟಾಕಿ ಮಾರಾಟದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾಹುತವಾದರೆ ತಾಲೂಕು ಆಡಳಿತವೇ ಸಂಪೂರ್ಣ ಹೊಣೆ ಹೊರಬೇಕಾಗಿರುತ್ತದೆ ಎಂದು ಉಪವಿಭಾಗ ಅಧಿಕಾರಿ ಹಾಗೂ ಡಿವೈಎಸ್ಪಿ ಯವರ ಕಚೇರಿಗೆ ಮನವಿಯನ್ನು ಸಲ್ಲಿಸಿ ಈ ಕೂಡಲೇ ಪಟಾಕಿಯನ್ನು ಮಾರಾಟ ಮಾಡುತ್ತಿರುವ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಮುಂದೆ ಆಗಬಹುದಾದ ತೊಂದರೆಯನ್ನು ತಪ್ಪಿಸಿ ಅವರಿಗೆ ಬದಲಿ ಸೂಕ್ತ ಸ್ಥಳವನ್ನು ನಿಗದಿ ಪಡಿಸಿ ಕೊಡುವಂತೆ ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಜಿಲಾಧ್ಯಕ್ಷರಾದ ಜೀವನ್ ಗೌಡ ತಾಲೂಕು ಅಧ್ಯಕ್ಷರಾದ ವಿಜಯ್ ಕುಮಾರ್ ತಾಲೂಕು ಉಪಾಧ್ಯಕ್ಷರಾದ ಪ್ರದೀಪ್ ಮಾವಿನಹಳ್ಳಿ ಹಾಗು ಪದಾಧಿಕಾರಿಗಳಾದ ಮಹೇಶ್ ಬಾಲರಾಜ್ ಸ್ಮಿಥನ್ ಮಂಜು ಪ್ರದೀಪ್ ಹಾಗು ಮುಂತಾದವರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *