ಸಕಲೇಶಪುರ : ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿರುವ ಹೋಂಸ್ಟೇಯೊಂದರಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಯೋಗೇಶ್ ಎಂಬಾತ ಹೋಂಸ್ಟೇ ಮಾಲೀಕರಾದ ನಾಗಮ್ಮ (85) ಜಯಮ್ಮ (65) ಎಂಬ ವಯೋವೃದ್ದೆಯರನ್ನು ಕಳೆದ 15 ದಿನಗಳಿಂದ ಹೋಂಸ್ಟೇನಲ್ಲೆ ಕೂಡಿ ಹಾಕಿದ್ದಾನೆಂಬ ಆರೋಪ ಕೇಳಿ ಬಂದಿದೆ.

ಇವರಿಬ್ಬರಿಗೂ ಆರೋಗ್ಯ ಸಮಸ್ಯೆಯಿದ್ದು ತಾಯಿ ಹಾಗೂ ಅಕ್ಕನನ್ನು ಅಲ್ಲಿಂದ ರಕ್ಷಣೆ ಮಾಡಿ ಎಂದು ನಾಗಮ್ಮ ಪುತ್ರ ಹಸಿಡೆ ಆನಂದಯ್ಯ ಕಣ್ಣೀರು ಹಾಕುತ್ತಿದ್ದಾರೆ.

ಆಸ್ತಿ ವಿವಾದವೆ ವೃದ್ದೆಯರನ್ನು ಹೋಂಸ್ಟೇನಲ್ಲಿ ಬಂಧನದಲ್ಲಿಡಲು ಕಾರಣ ಎಂದು ತಿಳಿದು ಬಂದಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು, ಪೋಲಿಸ್ ಇಲಾಖೆಯವರು ಇತ್ತ ಗಮನವರಿಸಿ ಹೋಂಸ್ಟೇನಲ್ಲಿ ಬಂಧನದಲ್ಲಿರುವ ವೃದ್ದೆಯರನ್ನು ರಕ್ಷಿಸಲು ಮುಂದಾಗಬೇಕಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *