
ಅರಸೀಕೆರೆ : ಮನುಷ್ಯ ಜ್ಞಾನದ ಬೆಳಕಿನ ಮೂಲಕ ತಮ್ಮಲ್ಲಿರುವ ಅಜ್ಞಾನದ ಕತ್ತಲೆಯನ್ನು ದೂರ ಮಾಡಬೇಕು ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು
ತಾಲೂಕಿನ ಕಣಕಟ್ಟೆ ಹೋಬಳಿ ಮಾಡಲು ಗ್ರಾಮದ ಶ್ರೀ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಾಲಯದ ಮುಂಭಾಗ ಲೋಕಕಲ್ಯಾಣಾರ್ಥವಾಗಿ ಆಯೋಜಿಸಿದ್ದ ಹನ್ನೊಂದು ಸಹಸ್ರ ದೀಪೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಹಣತೆ ಬೆಳಗಿಸುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು
ಪ್ರತಿಯೊಬ್ಬರು ದೀಪ ಹಚ್ಚುವ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಸಂಯಮ ಪ್ರೋತ್ಸಾಹ ತೋರಬೇಕು ಶ್ರೀಮಂತ ಬಡವ ಬಲ್ಲಿದ ಎನ್ನದೆ ಪ್ರಕಾಶಮಾನವಾಗಿ ದೀಪ ಎಲ್ಲರಿಗೂ ಬೆಳಕು ನೀಡುತ್ತದೆ ಎಂಬುವುದನ್ನು ಎಲ್ಲರೂ ಅರಿಯಬೇಕು ಎಂದು ಸ್ವಾಮೀಜಿ ಹೇಳಿದರು
ಸ್ವಾಮೀಜಿಯವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿನ ಸ್ವಾಗತಿಸಿದರು ನೂರಾರು ಭಕ್ತರು ಸ್ವಾಮೀಜಿಯವರಿಗೆ ಜಯ ಘೋಷ ಆಗುತ್ತಾ ಪುಷ್ಪಯರ ಚುತ್ತ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದರು
ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು ದೇವಾಲಯದಲ್ಲಿ ದೀಪೋತ್ಸವ ಹಿನ್ನೆಲೆಯಲ್ಲಿ ಸ್ವಾಮೀಜಿಯವರಿಗೆ ಶ್ರದ್ಧಾ ಭಕ್ತಿಯಿಂದ ರಾಧಪೂಜೆ ನೆರವೇರಿಸಲಾಯಿತು
ನಂತರ ಅರ್ಚಕರು ಹಾರನಹಳ್ಳಿ ಲಿಂಗೈಕ್ಯ ಶಿವಲಿಂಗ ಸ್ವಾಮೀಜಿ ಶ್ರೀ ನೀಲಲೋಚನ ಸ್ವಾಮೀಜಿ ಭಾವಚಿತ್ರಗಳಿಗೆ ಹಾಗೂ ಮಾಡಲು ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದರು ಇದೆ ವೇಳೆ ರಾಂಪುರ ನಿರ್ವಾಣ ಸಿದ್ದೇಶ್ವರ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು
ಕೋಡಿ ಮಠದ ಏಜೆಂಟ್ ಮಹದೇವಪ್ಪ ಸಮಿತಿ ಅಧ್ಯಕ್ಷ ಎಂಎಸ್ ನಟರಾಜ್ ಗೌರವಾಧ್ಯಕ್ಷ ಎಸ್ ಮಲ್ಲಿಕಾರ್ಜುನಪ್ಪ ಮುಖಂಡರಾದ ಎಂ ಸಿ ನಟರಾಜ್ ಗ್ರಾಮ ಪಂಚಾಯಿತಿ ಸದಸ್ಯ ಕೊಡ್ಲಿ ಬಸವರಾಜ್ ಮಾಡಳು ಶಿವಲಿಂಗಪ್ಪ ಎಂಜಿ ಶಿವಣ್ಣ ಎಂಎಸ್ ಮರಳೇಗೌಡ ದುಮ್ಮೇನಹಳ್ಳಿ ಶಂಕ್ರಪ್ಪ ಲೋಕೇಶ್ ಎಂಡಿ ಸೋಮಶೇಖರ್ ದಾಸಪ್ಪ ಚಂದ್ರಪ್ಪ ತಿಮ್ಮಯ್ಯ ಉಪಸ್ಥಿತರಿದ್ದರು


