
ಸಕಲೇಶಪುರ : ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ವರ್ತಕರ ಸಹಾಕಾರ ಪೊಲಿಸ್ ಇಲಾಖೆಗೆ ಬಹಳ ಮುಖ್ಯ ಎಂದು ಸಹಾಯಕ ಪೊಲೀಸ್ ಅಧೀಕ್ಷಕ ಮಿತುನ್ ಹೇಳಿದರು .ಶುಕ್ರವಾರ ಪಟ್ಟಣದ ಲಯನ್ಸ್ ಹಾಲ್ ಪೊಲೀಸ್ ಹಾಗೂ ವರ್ತಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಳ್ಳತನ ತಡೆ ಹಾಗೂ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಹಾಗೂ ಖಾಸಗಿಯವರ ಸಹಾಭಾಗೀತ್ವದಲ್ಲಿ ವಿಶೇಷ ಪ್ರಯೋಗಕ್ಕೆ ಪೊಲೀಸರು ಮುಂದಾಗಿದ್ದು ಈ ನಮ್ಮ ಕಾರ್ಯಕ್ಕೆ ವರ್ತಕರು ಸಹಕಾರ ನೀಡುವ ಮೂಲಕ ಸಹಕರಿಸಬೇಕು ಎಂದರು.ಸಕಲೇಶಪುರ ಉಪವಿಭಾಗದ ಸೇವಾ ಸಂಸ್ಥೆಯಲ್ಲಿ ವರ್ತಕರು, ವೈನ್ಸ್ ಶಾಪ್ ಮಾಲೀಕರು ಚಿನ್ನ ಬೆಳ್ಳಿ ಅಂಗಡಿ ಮಾಲೀಕರು, ಲಾಡ್ಜ್ ಮಾಲೀಕರು, ಸೇರಿದಂತೆ ಪಟ್ಟಣದ ಬಿ.ಎಂ.ರಸ್ತೆಯಲ್ಲಿ ಹೊಂದಿರುವ ವಿವಿದ ವರ್ತಕರು ಸೇರಿದಂತೆ ಇನ್ನಿತರ ಅಂಗಡಿಗಳಲ್ಲಿ ಕಳ್ಳತನ ತಡೆಗಟ್ಟಲು ವಿಶೇಷ ಸಿಸಿ ಕ್ಯಾಮರಾ ಅಳವಡಿಕೆಯಿಂದ ಸುಲಭವಾಗಿ ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚಲು ಸಾಧ್ಯ ಎಂದು ಹೇಳಿದರು ಶ್ರೀ ಕೃಷ್ಣ ಸೈನ್ ಇನ್ ಸೆಕ್ಯೂರಿಟಿ ಖಾಸಗಿ ಸಂಸ್ಥೆ ಸಿದ್ದ ಪಡಿಸಿರುವ ಸಿಸಿ ಕ್ಯಾಮರಾ ಅಳವಡಿಸಿ ಲೈವ್ ಮಾನಿಟರ್ ಮೂಲಕ ಕಳ್ಳರ ಪತ್ತೆಗೆ ಸಹಕಾರಿಯಾಗಲಿದೆ ಎಂದು ಸಂಸ್ಥೆಯ ರಕ್ಷಿತ್ ಸಭೆಗೆ ಬಂದಿದ್ದ ವರ್ತಕರರಿಗೆ ಈ ವಿನುತನ ಕ್ಯಾಮರಾ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಣೆ ನೀಡಿದರು.ಈ ಸಂಧರ್ಭದಲ್ಲಿ ವೃತ್ತ ನಿರೀಕ್ಷಕ ಚೈತನ್ಯ, ನಗರ ಠಾಣೆ ಪಿ ಎಸ್ ಐ ಸುನೀಲ್ ಸೇರಿದಂತೆ ಮುಂತಾದವರು ಇದ್ದರು.



