
ಸಕಲೇಶಪುರ.ಕಳೆದ ಒಂದು ದಿನದ ಹಿಂದೆಯಷ್ಟೇ ಆಟೋರಿಕ್ಷಾ ಚಾಲಕರ ಸಂಘದ ವತಿಯಿಂದ ಶಾಸಕರಿಗೆ ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಬಾಗ ಗುಂಡಿ ಬಿದ್ದು ನೀರು ನಿಂತು ಸಾರ್ವಜನಿಕರಿಗೆ ಹಾಗೂ ಆಟೋರಿಕ್ಷಾ ಚಾಲಕರಿಗೆ ತೊಂದರೆ ಆಗುತ್ತಿದೆ ಗುಂಡಿ ಮುಚ್ಚಿಸಿ ಕೊಡಿ ಎಂದು ಮನವಿ ಮಾಡಿದರು.ಈ ಮನವಿ ಸ್ಪಂದಿಸಿದ ನೂತನ ಶಾಸಕರು ಒಂದೇ ದಿವಸದಲ್ಲಿ ತಾವೇ ಖುದ್ದಾಗಿ ಸ್ಥಳಕ್ಕೆ ಹೋಗಿ ಕೆಲಸ ಮಾಡಿಸಿದ್ದಾರೆ.ಈ ಕೆಲಸಕ್ಕೆ ಸಾರ್ವಜನಿಕರು ಹಾಗೂ ಆಟೋರಿಕ್ಷಾ ಮಾಲೀಕ ಹಾಗೂ ಚಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



