
.ಸಕಲೇಶಪುರಸಕಲೇಶಪುರದ ಹಲಸುಲಿಗೆ ಗ್ರಾಮದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ವಿಜಯಯಾತ್ರೆ ಕಾರ್ಯಕ್ರಮ ನಡೆಯಿತು. ಹಲಸುಲಿಗೆ ಬಸ್ ನಿಲ್ದಾಣದ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಮೆರವಣಿಗೆ ಆರಂಭವಾಯಿತು. ಹಲಸುಲಿಗೆ ಸರ್ಕಾರಿ ಶಾಲೆ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದಲ್ಲಿ ಅನೇಕ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು.ಶಾಸಕರಾದ ಸಿಮೆಂಟ್ ಮಂಜುರವರಿಗೆ, ವಿಶ್ವ ಹಿಂದೂ ಪರಿಷತ್ ಮುಖಂಡ ರಘು ಸಕಲೇಶಪುರ ಸೇರಿದಂತೆ ಉದ್ಯಮಿ ಅರ್ಜುನ್ ಅವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಚುನಾವಣೆಗೆ ಮುನ್ನ ಆಲೂರಿನಲ್ಲಿ ನೆಡೆದ ಬಿಜೆಪಿಯ ರೋಡ್ ಶೋನಲ್ಲಿ ಅಮೀತ್ ಶಾ ಭಾಗವಹಿಸಿದ ಭಾವ ಚಿತ್ರ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಅಭ್ಯರ್ಥಿ ಸಿಮೆಂಟ್ ಮಂಜು ಮಾತನಾಡಿ ಇದು ಬಿಜೆಪಿಯ ಗೆಲುವಲ್ಲ ಕಾರ್ಯಕರ್ತರ ಗೆಲುವು ಸಿಮೆಂಟ್ ಮಂಜು ಸದಾ ನಿಮ್ಮೊಂದಿಗೆ ಇರುತ್ತಾರೆ ಎಂದರು. ವಿಶ್ವ ಹಿಂದೂ ಪರಿಷತ್ ಮುಖಂಡ ರಘು ಸಕಲೇಶಪುರ ಮಾತನಾಡಿ ನಿಮ್ಮ ನಿಮ್ಮ ಬೂತ್’ಗಳಿಗೆ ನೀವೆ ಸಿಮೆಂಟ್ ಮಂಜು ಎಂಬಂತೆ ಕಾರ್ಯನಿರ್ವಹಿಸಬೇಕು ಜನಸಾಮಾನ್ಯರಿಗೆ ಅಭಿವೃದ್ಧಿ ವಿಷಯದಲ್ಲಿ ರಾಜಿ ಆಗಬಾರದು ಎಂದರು.ಈ ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ವಿನಯ್. ಹಸಿಡೆ ರವಿ. ಹಲಸುಲಿಗೆ ಶಂಕರ್ ಸೇರಿದಂತೆ ಬಜರಂಗದಳ ಪ್ರಮುಖರಾದ ಪ್ರತಾಪ್ ಪೂಜಾರಿ. ಶಿವು ಜಿಪ್ಪಿ. ಶೇಖರ್. ಧರ್ಮೇಶ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು…








