ಸಕಲೇಶಪುರ : ಭಾರತದಲ್ಲಿ ಶೋಷಿತ ಸಮುದಾಯಗಳಿಗೆ ಬದುಕನ್ನು ಕಟ್ಟಿಕೊಳ್ಳಲು ಹೋರಾಟ ನಡೆಸಿ ತ್ಯಾಗ ಬಲಿದಾನ ಮಾಡಿದ ಇತಿಹಾಸಕಾರರ ಚರಿತ್ರೆಯನ್ನು ತಿಳಿಸುವ ಹಾಗೂ ಅವರ ಆದರ್ಶ ತತ್ವ ಸಂದೇಶಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಕಳೆದ ಹತ್ತು ವರ್ಷಗಳಿಂದ ಮಾನವ ಬಂಧುತ್ವ ವೇದಿಕೆ ಮಾಡುತ್ತಾ ಬಂದಿದೆ ಎಂದು ವೇದಿಕೆಯ ಜಿಲ್ಲಾ ಸಂಚಾಲಕ ಜೈ ಭೀಮ್ ಮಂಜು ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಶೋಷಿತ ಸಮುದಾಯ ಮೌಡ್ಯ ಆಚರಣೆ ಧಿಕ್ಕರಿಸಿ ವೈಚಾರಿಕ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಬದುಕಿನ ಅರ್ಥ ತಿಳಿದುಕೊಳ್ಳಬಹುದಾಗಿದೆ.

ಬುದ್ಧ, ಬಸವ, ಅಂಬೇಡ್ಕರ್ ಅವರ ಚರಿತ್ರೆಯನ್ನು ಯುವ ಸಮುದಾಯ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು.

ಮಾನವ ಬಂದುತ್ವ ವೇದಿಕೆ ತಾಲೂಕು ಪ್ರಧಾನ ಕಾರ್ಯದರ್ಶಿ ಕಾಡಪ್ಪ ಮಾತನಾಡಿ ಮಾನವ ಬಂಧುತ್ವ ವೇದಿಕೆ ನಡೆದು ಬಂದ ಚಳುವಳಿಯ ಕಾರ್ಯಕ್ರಮವನ್ನು ತಿಳಿಸಿ ಜನವರಿ 26 ರಂದು ತಾಲೂಕು ಆಡಳಿತ ಸೌಧದ ಮುಂಭಾಗವಿರುವ ಡಾ.ಬಿ.ಆರ್.ಅಂಭೇಡ್ಕರ್ ಅವರ ಪ್ರತಿಮೆಯ ಮುಂಭಾಗ ಸಾಮೂಹಿಕವಾಗಿ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮತ್ತು ದಾವಣಗೆರೆಯಲ್ಲಿ ಏಪ್ರಿಲ್‌ನಲ್ಲಿ ನಡೆಯುವ ರಾಜ್ಯಮಟ್ಟದ ಸಂವಿಧಾನ ಸಂಕಲ್ಪ ದಿನ ಸಮಾವೇಶದಲ್ಲಿ ತಾಲೂಕಿನಲ್ಲಿ ವೇದಿಕೆಯ ವತಿಯಿಂದ ನೂರಾರು ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಆದಿವಾಸಿಗಳ ಮತ್ತು ಅಸಲರ ಸಂಘಟನೆಯ ಜಿಲ್ಲಾ ಮುಖಂಡ ನವೀನ್ ಸದಾ ಮಾತನಾಡಿದರು.

ಸಭೆಯಲ್ಲಿ ತಾಲೂಕು ಸಮಿತಿಯನ್ನು ರಚನೆ ಮಾಡಲಾಗಿ ತಾಲೂಕು ಪ್ರಧಾನ ಸಂಚಾಲಕರಾಗಿ ಕಾಡಪ್ಪ ಅವರು ಮುಂದುವರೆದಿದ್ದು,ಸಂಚಾಲಕರುಗಳಾಗಿ ನಿಂಗರಾಜು ಗುನಿಗನಹಳ್ಳಿ, ತಿಮ್ಮಯ್ಯ ಕೌಡಳ್ಳಿ, ನವೀನ್ ಸದಾ ಬಾಳ್ಳುಪೇಟೆ, ಮಂಜಯ್ಯ ಗುಡಾಣಕೆರೆ, ದೇವರಾಜು ಆಚಂಗಿ, ದೇವಪ್ಪ ಕೌಡಳ್ಳಿ, ಧರಣಿ ಕೃಷ್ಣಾಪುರ, ಎಸ್.ಬಿ.ಮಂಜುನಾಥ್ ಕುಶಾಲನಗರ, ಹಾಗೂ ವೇದಿಕೆಯ ನಿರ್ದೇಶಕರುಗಳಾಗಿ ಮಲ್ಲೇಶ್ ಕೃಷ್ಣಾಪುರ, ಬಿ.ಬಿ.ಮಂಜುನಾಥ್ ಬೈಕೆರೆ, ಹರೀಶ್ ಹಾಲೆಬೇಲೂರು, ರವಿ ಕಲ್ಗಣೆ, ಎಸ್.ವಿ.ಯೋಗೀಶ್ ಕುಶಾಲನಗರ, ಧರ್ಮಶೇಖರ್ ರಾಮೇನಹಳ್ಳಿ, ಕುಮಾರಸ್ವಾಮಿ ಕೌಡಳ್ಳಿ, ವೀರಭದ್ರ ದೋಣಿಗಾಲ್, ವಿರೂಪಾಕ್ಷ ಸತ್ತಿಗಾಲ್, ಮತ್ತು ಮಹಿಳಾ ವಿಭಾಗಕ್ಕೆ ಕುಮಾರಿ ಕವನ ಗಂಗಣ್ಣ, ಇವರುಗಳನ್ನು ಆಯ್ಕೆ ಮಾಡಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *