ಸಕಲೇಶಪುರ : ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವುದರ ಮೂಲಕ ರೈತರ ಏಳಿಗೆಗೆ ಶ್ರಮಿಸಬೇಕು ಎಂದು ಸಮಾಜ ಸೇವಕರಾದ ಯಡೇಹಳ್ಳಿ ಆರ್ ಮಂಜುನಾಥ್ ಹೇಳಿದರು.

ಶನಿವಾರ ತಾಲೂಕಿನ ಬಾಳ್ಳುಪೇಟೆಯಲ್ಲಿರುವ ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಸಂಸ್ಥಾಪಕ ಅಧ್ಯಕ್ಷರಿಂದ ಹಿಡಿದು ಇಲ್ಲಿವರೆಗೂ ಎಲ್ಲಾ ಅಧ್ಯಕ್ಷರುಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ ಫಲವಾಗಿ ಇಡೀ ಜಿಲ್ಲೆಯಲ್ಲಿ ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೊದಲನೇ ಸ್ಥಾನದಲ್ಲಿರುವುದು ಶ್ಲಾಘನೀಯವಾದದ್ದು.

ಸಂಘದ ಕಚೇರಿ ಸುಸಜ್ಜಿತವಾಗಿ, ಗಣಕೀಕರಣ ಆಗಿರುವುದು ರೈತರಿಗೆ ಹಾಗೂ ಸದಸ್ಯರಿಗೆ ಅನುಕೂಲವಾಗಿದೆ ಎಂದರು.

ಸಂಘದ ಅಧ್ಯಕ್ಷ ಬಿ.ಬಿ ಲೋಕೇಶ್ ಮಾತನಾಡಿ, ಸಂಘ ಪ್ರಾರಂಭವಾಗಿ ಇದುವರೆಗೂ ಕ್ಯಾಲೆಂಡರ್ ಬಿಡುಗಡೆ ಮಾಡಿರಲಿಲ್ಲ ಹಲವು , ವರ್ಷಗಳ ಕಳೆದ ನಂತರ ಪ್ರಸಕ್ತ ವರ್ಷದಲ್ಲಿ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದೇವೆ. ನಾನು ಅಧ್ಯಕ್ಷನದ ಮೇಲೆ 30 ಲಕ್ಷ ರೂ ಸಹ ತಂದು 69 ರೈತರಿಗೆ ಸಾಲ ನೀಡಿದ್ದೇವೆ. ಮುಂದೆಯೂ ರೈತರಿಗೆ ಉತ್ತಮ ಕಾರ್ಯ ನಿರ್ವಹಿಸಲು ನಿರ್ದೇಶಕರ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಬಿ.ಡಿ ಬಸವಣ್ಣ,ಬಿ. ಎ ನಾಗೇಶ್, ಉಪಾಧ್ಯಕ್ಷರಾದ ಉಷಾರಾಣಿ,ಸಂಘದ ನಿರ್ದೇಶಕರಾದ ಹೆಗ್ಗೊವೆ ಪುಟ್ಟರಾಜು,ಬಿ. ಎಂ ನೇತ್ರಾವತಿ,ಸಂಗಪ್ಪ, ವೈ. ಡಿ ಬಸವರಾಜ್,ಎಂ.ಎಸ್ ಚಂದ್ರಶೇಖರ್,ಬಿ. ಎಸ್ ರಾಜೇಶ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರೂಪ ಸೇರಿದಂತೆ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *