ಸಕಲೇಶಪುರ : ಆನೆಮಹಲ್ ಇಂದ ಮೂಡಿಗೆರೆ ಕಡೆ ಹಾನುಬಾಳು ಮಾರ್ಗ ವಾಗಿ ಸಾಗುವ ಪ್ರಮುಖ ರಾಜ್ಯ ಹೆದ್ದಾರಿಯ ಗುಂಡಿ ಬಿದ್ದಿರುವ ಜಾಗದ ಒಂದು ಚಿತ್ರ ಅಷ್ಟೇ

ಹಾನುಬಾಳು ಹೋಬಳಿ ಹಾಸನ ಜಿಲ್ಲೆಯಲ್ಲೇ ಮಹತ್ವ ವಿರುವ ಹೋಬಳಿ, ಇಲ್ಲಿ ಕಾಫಿ, ಕರಿ ಮೆಣಸು , ಈ ಹಿಂದೆ ಏಲಕ್ಕಿ ಬೆಳೆಗೆ ಹೆಸರುವಾಸಿ ಆದಂತ ಪ್ರದೇಶ, ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ಪ್ರವಾಸಕ್ಕೆ ಹೆಸರುವಾಸಿ ಆದ ಪಶ್ಚಿಮ ಘಟ್ಟದ ಪ್ರದೇಶ, ಸಾವಿರಾರು ಪ್ರವಾಸಿಗಳು ವಾರದ ದಿನಗಳಲ್ಲಿ ಬರುತ್ತಿರುತ್ತಾರೆ, ಮತ್ತು ಚಾರ್ಮಾಡಿ ಘಾಟ್ ಮತ್ತು ಶಿರಾಡಿ ಘಾಟ್ ಸಂಪರ್ಕಿಸುವ ಪ್ರಮುಖ ಹೆದ್ದಾರಿ , ಈ ರಸ್ತೆಗೆ ಗುಂಡಿ ಬಿದ್ದಿದ್ದು, ಹಲವು ಬಾರಿ PWD ಇಂಜಿನಿಯರ್ ಅವರನ್ನು ಭೇಟಿ ಆಗಿ ಬಿದ್ದಿರುವ ಗುಂಡಿ ಮುಚ್ಚಿಸಲು ಕ್ರಮ ಕೈ ಗೊಳ್ಳುವಂತೆ ಹೇಳಿದ್ದೇನೆ,

ಆಗುತ್ತೆ ಆಗುತ್ತೆ ಅಂತ 3 ತಿಂಗಳಿನಿಂದ ಅದೆ ಉತ್ತರ,ಈ ರಸ್ತೆಗೆ ಗುಂಡಿ ಮುಚ್ಚಲು ಇನ್ನು ಟಾರು, ಜಲ್ಲಿ ಸಿಗದಿರುವುದು ವಿಪರ್ಯಾಸ, ಇದು ಯಾವಾಗ ಸಿಗುವುದು. ಯಾರಿಗೆ ಹೇಳುವುದು ಬಿಡಿ ಅತ್ಲಾಗಿ, ದುಡ್ದು ಇಲ್ಲ ಅಂದ್ರೆ ಸ್ವಲ್ಪ ದಿನ ಕಾದು ಸಾರ್ವಜನಿಕ ವಾಗಿ ಭಿಕ್ಷೆ ಎತ್ತಿ ನಾವೆ ಗುಂಡಿ ಮುಚ್ಚಿಸೋಣ ಈ ಕಾರ್ಯಕ್ಕೆ ಯಾರ್ಯಾರು ಕೈ ಜೋಡಿಸುತ್ತಿರಿ ✍️ ಅವರೇಕಾಡು ಪೃಥ್ವಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *