*ಆಲೂರು : ಛಲವಾದಿ ಮಹಾಸಭಾ (ರಿ)ಆಲೂರು ತಾಲ್ಲೂಕು ಸಮಿತಿ ಇವರ ವತಿಯಿಂದ ಎರಡನೇ ವರ್ಷದ ಕರೋಕೆ ಗೀತಾ ಗಾಯನ ಸ್ವರ ಸಂಭ್ರಮ ಕಾರ್ಯಕ್ರಮವನ್ನು ಅದ್ದೂರಿಯಾಗಿ ಡಾ, ಬಿ, ಆರ್ ಅಂಬೇಡ್ಕ‌ರ್ ಭವನದಲ್ಲಿ ಆಯೋಜಿಸಲಾಗಿತ್ತು…

ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಹೆಚ್,ಕೆ ಕುಮಾರಸ್ವಾಮಿ ಹಾಗೂ ವಾಣಿ ಶಿವರಾಮ್ ರವರು ಗಿಡಕ್ಕೆ ನೀರನ್ನು ಎರೆದು ಡಾ,ಬಿ,ಆರ್ ಅಂಬೇಡ್ಕರ್ ಹಾಗೂ ಕೆ,ಶಿವರಾಂ ರವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಆಲೂರು ಸಕಲೇಶಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮುರುಳಿ ಮೋಹನ್‌, ಶಾಂತ ಕೃಷ್ಣ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಪೃಥ್ವಿ ಜಯರಾಮ್ ಹಾಗೂ ಛಲವಾದಿ ರಾಜ್ಯ ಉಪಾಧ್ಯಕ್ಷರಾದ ಬಸವರಾಜು ಖಜಾಂಚಿ ಮೈಕೋ ನಾಗರಾಜು, ನಿರ್ದೇಶಕರುಗಳಾದ ಕೃಷ್ಣಪ್ಪ, ಸಿದ್ದರಾಜು,ಮಹದೇವ್, ನಾಗೇಶ್ ಶಿವಪ್ಪ,ಜವರಯ್ಯ, ಶಿವಣ್ಣ ಸಂಘಟನೆ ಕಾರ್ಯದರ್ಶಿ ವಸಂತ ರಾಜಪ್ಪ ಪರಶ್ ರಾಮ್ ಹಾಗೂ ತಾಲ್ಲೂಕು ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸಾರ್ವಜನಿಕರಿದ್ದರು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *