ಸಕಲೇಶಪುರ:- ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿಯಲ್ಲಿ 14ನೇ ವರ್ಷದ ಜಾತ್ರಾ ಮಹೋತ್ಸವ ದಿನಾಂಕ 8.2.2025ನೇ ಶನಿವಾರದಂದು ಶ್ರೀ ಪ್ರಶಾಂತ್ ಸ್ವಾಮಿ ನೇತೃತ್ವದಲ್ಲಿ ನಡೆಯಲಿದೆ.

ದಿನಾಂಕ : 07-2-2025ನೇ ಶುಕ್ರವಾರ ಮಧ್ಯಾಹ್ನ 12-15 ಗಂಟೆಗೆ ಶ್ರೀ ಶನೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯ ದೇವರುಗಳಿಗೆ “ರುದ್ರಾಭಿಷೇಕ ಹಾಗೂ ಹೋಮ”ನಂತರ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ದಿನಾಂಕ : 8-2-2025ನೇ ಶನಿವಾರ ಬೆಳಿಗ್ಗೆ 07-30 ಗಂಟೆಗೆ “ಗಂಗಾಪೂಜೆ” ಹಾಗೂ ಬೆಳಿಗ್ಗೆ : 8-45 ರಿಂದ 10-45ರ ವರೆಗೆ ನಡೆಮುಡಿ ಕಳಸೋತ್ಸವ,ಬೆಳಿಗ್ಗೆ 11-00 ರಿಂದ 12-00ರ ವರೆಗೆ ಪುಷ್ಪಾಲಂಕಾರ, ಶ್ರೀ ಶನೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ,ಶ್ರೀ ಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯ ದೇವರುಗಳಿಗೆ”ಅಷ್ಟೋತ್ತರ ಶತನಾಮಾನ”ಮಧ್ಯಾಹ್ನ 12-00 ರಿಂದ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ,ಮಧ್ಯಾಹ್ನ 1-00 ಗಂಟೆಗೆ “ಪ್ರಸಾದ ಅನ್ನ ಸಂತರ್ಪಣೆ” ಹಾಗೂ ಮಧ್ಯಾಹ್ನ 3-30 ರಿಂದ 5-30ರ ವರೆಗೆ ಅಡ್ಡೆ ಉತ್ಸವ,ರಾತ್ರಿ 7-30 ರಿಂದ 9-00ರ ವರೆಗೆ ಪ್ರಸಾದ ಅನ್ನ ಸಂತರ್ಪಣೆ,ರಾತ್ರಿ 9-30 ಗಂಟೆಗೆ ಶನಿಮಹಾತ್ಮ ಹರಿಕಥೆ(ಶ್ರೀ ಚುಂಚಪ್ಪ ಮತ್ತು ಸಂಗಡಿಗರು, ಕಡದರವಳ್ಳಿ ಇವರಿಂದ)ರಾತ್ರಿ 11-30 ಗಂಟೆಗೆ ನವಗ್ರಹ ಪೂಜೆ,ಹರಿಕಥೆ ನಂತರ ಎಳ್ಳುಭತ್ತಿ – ದೀಪೋತ್ಸವ ನೆಡೆಯಲಿದೆ.

ವಳಲಹಳ್ಳಿ ಮತ್ತು ಹಿರಿಯೂರು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಊರಿನ ಗ್ರಾಮಸ್ಥರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಲಿ ಪುರುಷನ ವೈಭವದ ಉತ್ಸವವನ್ನು ಅದ್ದೂರಿಯಾಗಿ ನಡೆಸಿಕೊಡುವಂತೆ ಕೋರಲಾಗಿದೆ.

ಪೂಜಾ ಕಾರ್ಯಕ್ರಮವನ್ನು ನಡೆಸಿಕೊಡುವವರು :ಓಂ ಶ್ರೀ ಗರುಶನೈಶ್ಚರ ಸ್ವಾಮಿ ಸನ್ನಿಧಿ, ಶ್ರೀ ಕ್ಷೇತ್ರ – ವಳಲಹಳ್ಳಿ, ಭಕ್ತಾಧಿಗಳು ಮತ್ತು ಸೇವಾ ಕಾರ್ಯಕರ್ತರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed