
ಬೇಲೂರು : ಬೇಲೂರು ತಾಲೂಕಿನ ಹಾಲ್ ತೊರೆ ಗ್ರಾಮದ ಶಂಕರೇಗೌಡ ಎಂಬುವರಿಗೆ ಸೇರಿದ ಆರು ಎಕರೆ ಕಾಫಿ ತೋಟಕ್ಕೆ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದೆ.
ಹಾಲ್ಥಾರೆ ಗ್ರಾಮದ ಶಂಕರೇಗೌಡ ಎಂಬುವರಿಗೆ ಸೇರಿದ ಸರ್ವೆ ನಂಬರ್ 6 ರಲ್ಲಿ. 4000 ಕಾಫಿ ಗಿಡಗಳು 3000 ಮೆಣಸಿನ ಬಳ್ಳಿ 100 ತೆಂಗಿನ ಪಸಲು 200 ಹೆಚ್ಚು ಅಡಿಕೆ ಗಿಡಗಳು ಬೆಂಕಿಯ ಜ್ವಾಲೆಗೆ ಸಂಪೂರ್ಣ ಸುಟ್ಟುಹೋಗಿದೆ ಬೆಂಕಿ ಬಿದ್ದ ತಕ್ಷಣ ಗ್ರಾಮಸ್ಥರು ಕುಟುಂಬಸ್ಥರೆಲ್ಲ ಸೇರಿ ನಂದಿಸಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗಿಲ್ಲ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಕ್ಕ ಪಕ್ಕದ ತೋಟಗಳಿಗೆ ಬೆಂಕಿ ಹಚ್ಚುಕೊಳ್ಳುವುದನ್ನು ತಪ್ಪಿಸಿದ್ದಾರೆ
ಶಂಕರೇ ಗೌಡ ಅವರಿಗೆ ಇದ್ದಂತಹ ಜಮೀನು ಸಂಪೂರ್ಣವಾಗಿದ್ದರಿಂದ ಕುಟುಂಬಸ್ಥರ ಕಣ್ಣೀರು ಸ್ಥಳದಲ್ಲಿದ್ದ ಗ್ರಾಮಸ್ಥರ ಕಣ್ಣಲ್ಲಿ ನೀರು ತರಿಸುತ್ತಿತ್ತು