
ಸಕಲೇಶಪುರ :- ಹೆತ್ತೂರು ಹೋಬಳಿಯ ಬೊಬ್ಬನಹಳ್ಳಿ -ಜಾತಹಳ್ಳಿ ಇತಿಹಾಸ ಪ್ರಸಿದ್ಧವಾದ ಶ್ರೀ ಮಲ್ಲೇಶ್ವರ ಸ್ವಾಮಿಯ ವರ್ಷಕ್ಕೊಮ್ಮೆ ನಡೆಯುವ ಜಾತ್ರೋತ್ಸವನ್ನು ದಿನಾಂಕ: 10.02.2025 ರ ಸೋಮವಾರ ನೆಡೆಯಲಿದೆ.ದಿನಾಂಕ: 09.02.2025 ರ ಭಾನುವಾರ ರಾತ್ರಿಯಿಂದ ಕಳಸ ಪೂಜೆ ಕಂಬದ ದೀಪೋತ್ಸವ ಸೇರಿದಂತೆ ದೇವರ ಪೂಜಾ ಕಾರ್ಯಕ್ರಮ ನೆಡೆಯಲಿದೆ.
ಸೋಮವಾರ ಪ್ರಾತಃ ಕಾಲದಲ್ಲಿ ದೇವರಿಗೆ ಅಭಿಷೇಕ, ಮಹಾ ನೈವೇದ್ಯ,ಮಹಾಮಂಗಳಾರತಿ ನಂತರ ಹಣ್ಣು ಕಾಯಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಗುವುದು .ಹಾಗೂ ವಳಲಹಳ್ಳಿ ಬೆಳೆಗಾರರ ಸಂಘದಿಂದ ಭಕ್ತಾದಿಗಳಿಗೆ ಉಚಿತ ಕಾಪಿ ವಿತರಿಸಲಾಗುವುದು.
ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನದ ಆಡಳಿತ ಮಂಡಳಿಯವರು ಸುಮಾರು 15 ದಿನಗಳಿಂದ ವ್ಯವಸ್ಥಿತವಾದ ತಯಾರಿಯನ್ನು ಮಾಡಿಕೊಂಡಿದ್ದು ಸಾವಿರಾರು ಭಕ್ತಾದಿಗಳು ದರ್ಶನಮಾಡುವ ಸಾಧ್ಯತೆ ಇದೆ.ಹಾಗೂ ದಿನಾಂಕ: 11.02.2025 ರ ಮಂಗಳವಾರ ವಳಲಹಳ್ಳಿ”ಶ್ರೀ ಬಸವೇಶ್ವರ ಸ್ವಾಮಿ” ಜಾತ್ರಾ ಮಹೋತ್ಸವ ನಡೆಯಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಆಡಳಿತ ಮಂಡಳಿಯವರು ಈ ಮೂಲಕ ಮನವಿ ಮಾಡಿದ್ದಾರೆ.