ಸಕಲೇಶಪುರ ರೆಸಾರ್ಟ್ ಅಸೋಸಿಯೇಷನ್ ಮತ್ತು ಅರ್ಜುನ್ ಟ್ರಾವೆಲ್ಸ್ ಬೆಂಗಳೂರು ಇವರ ಸಹಯೋಗದಲ್ಲಿ, S A P ಜರ್ಮನ್ ಸಾಪ್ಟ್ವೇರ್ ಕಂಪನಿ ಇವರು, ಸಕಲೇಶಪುರ ತಾಲ್ಲೂಕ್ ಹಾನುಬಾಳು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ಶಾಲೆಯಲ್ಲಿ, ವ್ಯಾಸಂಗ ಮಾಡುತ್ತಿರುವ ಆಯ್ದ ಪ್ರತಿಭಾನ್ವಿತ ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಬೈಸಿಕಲ್ ಗಳನ್ನು ಉಚಿತ ಕೊಡುಗೆಯಾಗಿ ನೀಡಿರುತ್ತಾರೆ. ಈ ಸಮಾರಂಭವು ದಿನಾಂಕ -11-02-2025 ರಂದು, ರೊಸೆಟ್ಟಾ ಸಕಲೇಶಪುರ ರೆಸಾರ್ಟ್ ನಲ್ಲಿ ನಡೆಯಿತು.

ಈ ಸಮಾರಂಭದಲ್ಲಿ ಸಕಲೇಶಪುರ ರೆಸಾರ್ಟ್ ಅಸೋಸಿಯೇಷನ್ ನ ಅಧ್ಯಕ್ಷರಾದ, ಲೋಕೇಶ್ ಮಸ್ತಾರೆ , ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಹಿರಿಯ ವಿದ್ಯಾರ್ಥಿ ಸಂಘ ಕೆ.ಪಿ.ಎಸ್. ಹಾನುಬಾಳು ಇದರ ಉಪಾಧ್ಯಕ್ಷರಾದ ಹರೀಶ್ ಕಾಡುಮಕ್ಕಿ ಹಾಗೂ ಅರ್ಜುನ್ ಟ್ರಾವೆಲ್ಸ್ ಬೆಂಗಳೂರು ಇದರ ಮಾಲಿಕರಾದ ರವಿ ಇವರ ನೇತ್ರುತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು.

ಸಮಾರಂಭದಲ್ಲಿ ಶಾಲೆಯ ಪರವಾಗಿ ಶಾಲಾ ಎಸ್,ಡಿ,ಎಂ,ಸಿ ಅಧ್ಯಕ್ಷರಾದ ಅರುಣ್.ಹೆಚ್.ಕೆ. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಲೋಹಿತ್.ಐ.ಎಸ್. ಶಾಲಾ ಮುಖ್ಯೋಪಾಧ್ಯಾಯರಾದ ವನಜಾಕ್ಷಿ ಹಾಗೂ ಸಹಶಿಕ್ಷಕರಾದ ಪ್ರಮೋದ್ ಹಾಜರಿದ್ದರು. ಸಮಾರಂಭದಲ್ಲಿ ಭಾಗಿಯಾಗಿ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸರ್ವರಿಗೂ ಶಾಲೆಯ ಪರವಾಗಿ ವಿಶೇಷ ಅಭಿನಂದನೆಗಳು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *