
ಸಕಲೇಶಪುರ : ನಿರಂತರವಾಗಿ ರಸ್ತೆಯಲ್ಲಿ ತಿರುಗಾಡುತ್ತ ಉಪಟಳ ನೀಡುತ್ತಿದ್ದ ಮಕನ ಪುಂಡಾನೆಯನ್ನು ಸೆರೆ ಹಿಡಿದು ಸಕ್ಕರೆ ಬೈಲಿಗೆ ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾದರು.
23/03/2025 ರಂದು ನೆಡೆದ ಕಾರ್ಯಾಚರಣೆಯಲ್ಲಿ ಸಾರ್ವಜನಿಕರ ಮೇಲೆ ಮತ್ತು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ದಾಳಿ ಮಾಡುತ್ತಾ ಬೆಳೆ ನಾಶ,ಆಸ್ತಿ ನಷ್ಟ ಉಂಟು ಮಾಡುತ್ತಿದ್ದ ಅಂದಾಜು 15 ರಿಂದ 18 ವರ್ಷ ವಯಸ್ಸಿನ ಮಕ್ನ ಕಾಡಾನೆಯನ್ನು ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ದೊಡ್ಡದೀಣೆ ಗ್ರಾಮದ ಬಳಿ ಇರುವ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಯಿತು
ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯು ಕಾರ್ಯಾಚರಣೆಯನ್ನು ಕೈಗೊಂಡಿತ್ತು ಕಾಡಾನೆಯನ್ನು ಸೆರೆ ಹಿಡಿಯು ಸಂದರ್ಭದಲ್ಲಿ ಸುಭಾಷ್ ಕೆ ಮಾಲ್ಕಡೆ, ಭಾ.ಅ.ಸೇ., ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ವನ್ಯಜೀವಿ) ಬೆಂಗಳೂರು, ಡಾ. ಮನೋಜ್. ಆರ್. ಭಾ.ಅ.ಸೇ., ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ಆನೆ ಯೋಜನೆ) ಬೆಂಗಳೂರು, ರವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಚರಣೆಯಲ್ಲಿ ಏಡುಕುಂಡಲ ಭಾ.ಅ.ಸೇ ಅರಣ್ಯಸಂರಕ್ಷಣಾಧಿಕಾರಿಗಳು ಹಾಸನ ವೃತ್ತ, ಹಾಸನ ರವರು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಸನ ಪ್ರಾದೇಶಿಕ ವಿಭಾಗ ಹಾಗು ಜಿಲ್ಲಾ ಆನೆ ಕಾರ್ಯಪಡೆ ಸಕಲೇಶಪುರ, ವಿಭಾಗದ ಎಲ್ಲಾ ಸಹಾಯಕ ಅರಣ್ಯಸಂರಕ್ಷಣಾಧಿಕಾರಿಗಳು , ನಾಗರಹೊಳೆ ಮತ್ತು ಬಂಡಿಪುರ ಪಶುವೈಧ್ಯಾಧಿಕಾರಿಗಳು ಮತ್ತು ಇತರೆ ಅಧಿಕಾರಿ ಸಿಬ್ಬಂದಿಗಳೊಂದಿಗೆ ಧನಂಜಯ , ಪ್ರಶಾಂತ, ಭೀಮ ,ಕಂಜನ್, ಹರ್ಷ, ಏಕಲವ್ಯ, ಮತ್ತು ಮಹೇಂದ್ರ ಎಂಬ ಕುಮ್ಕಿ ಸಾಕಾನೆಗಳು ಭಾಗವಹಿಸಿದ್ದವುಈ ಸಂದರ್ಭದಲ್ಲಿ ಆರ್.ಆರ್.ಟಿ ಸಿಬ್ಬಂದಿಗಳು ಮಾವುತರು ಸಹ ಇದ್ದರು
